ದಿಲ್ಲಿಗೆ 2 ರನ್ ಸೋಲು, ಪಂತ್ ಶತಕ ವ್ಯರ್ಥ

Update: 2018-02-15 18:31 GMT

ಹೊಸದಿಲ್ಲಿ, ಫೆ.15: ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಮೆಂಟ್‌ನಲ್ಲಿ ದಿಲ್ಲಿ ತಂಡ ಹಿಮಾಚಲ ಪ್ರದೇಶದ ವಿರುದ್ಧ ಕೇವಲ 2 ರನ್‌ನಿಂದ ಸೋತಿದೆ.

93 ಎಸೆತಗಳಲ್ಲಿ 135 ರನ್ ಗಳಿಸಿದ ದಿಲ್ಲಿ ಬ್ಯಾಟ್ಸ್‌ಮನ್ ರಿಷಬ್ ಪಂತ್ ಶತಕದ ಸಾಹಸ ವ್ಯರ್ಥವಾಯಿತು.

ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 305 ರನ್ ಗುರಿ ಪಡೆದಿದ್ದ ದಿಲ್ಲಿ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ನಿತೀಶ್ ರಾಣಾ(52 ರನ್, 57 ಎಸೆತ) ಹಾಗೂ ಪಂತ್ 4ನೇ ವಿಕೆಟ್‌ಗೆ 115 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ರಾಣಾ ಔಟಾದಾಗ ದಿಲ್ಲಿ 207 ರನ್ ಗಳಿಸಿತ್ತು. 93 ಎಸೆತಗಳಲ್ಲಿ 16 ಬೌಂಡರಿ ಹಾಗೂ 5 ಸಿಕ್ಸರ್‌ಗಳ ಸಹಿತ 135 ರನ್ ಗಳಿಸಿದ ಪಂತ್ 47ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ದಿಲ್ಲಿ 49.4 ಓವರ್‌ಗಳಲ್ಲಿ 302 ರನ್‌ಗೆ ಆಲೌಟಾಯಿತು. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಹಿಮಾಚಲ ಪ್ರದೇಶ ಪ್ರಶಾಂತ್ ಚೋಪ್ರಾ(150) ಭರ್ಜರಿ ಶತಕದ ಸಹಾಯದಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 304 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News