ದಕ್ಷಿಣ ಆಫ್ರಿಕಕ್ಕೆ ಪ್ರಯಾಣ ಬೆಳೆಸಿದ ಸುರೇಶ್ ರೈನಾ

Update: 2018-02-15 18:33 GMT

ಹೊಸದಿಲ್ಲಿ, ಫೆ.15: ಭಾರತದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಗುರುವಾರ ಜೋಹಾನ್ಸ್‌ಬರ್ಗ್ ಗೆ ಪ್ರಯಾಣ ಬೆಳೆಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ರೈನಾ ದಕ್ಷಿಣ ಆಫ್ರಿಕ ವಿರುದ್ದ ರವಿವಾರ ಆರಂಭವಾಗಲಿರುವ ಟ್ವೆಂಟಿ-20 ಸರಣಿಗೆ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದಾರೆ. ಕೆ.ಎಲ್. ರಾಹುಲ್ ಹಾಗೂ ಜೈದೇವ್ ಉನದ್ಕಟ್ ಜೊತೆಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣದ ತನ್ನ ಖಾತೆಯಲ್ಲಿ ಹಾಕಿರುವ ರೈನಾ, ‘‘ಜೋಹಾನ್ಸ್‌ಬರ್ಗ್‌ಗೆ ಹೊರಟಿರುವೆ...ಇನ್ನು ಹೆಚ್ಚು ಕಾಯಲು ಸಾಧ್ಯವಾಗುತ್ತಿಲ್ಲ’’ ಎಂದು ಬರೆದಿದ್ದಾರೆ. ದೀರ್ಘ ಸಮಯದ ಬಳಿಕ ಭಾರತ ತಂಡಕ್ಕೆ ವಾಪಸಾಗಿರುವ ರೈನಾಗೆ ಪಾಕಿಸ್ತಾನದ ವೇಗದ ಬೌಲರ್ ಮುಹಮ್ಮದ್ ಆಮಿರ್, ದಕ್ಷಿಣ ಆಫ್ರಿಕದ ಮಾಜಿ ಆಟಗಾರ ಜಾಂಟಿ ರೋಡ್ಸ್ ಟ್ವಿಟರ್‌ನ ಮೂಲಕ ಶುಭ ಹಾರೈಸಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಪ್ರಸ್ತುತ ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿದ್ದು, ರೈನಾ ಟ್ವೆಂಟಿ-20 ತಂಡವನ್ನು ಸೇರಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News