ಐಪಿಎಲ್ ಆರಂಭದಲ್ಲಿ ಫಿಂಚ್, ಮ್ಯಾಕ್ಸ್‌ವೆಲ್ ಅಲಭ್ಯ

Update: 2018-02-15 18:34 GMT

ಮೆಲ್ಬೋರ್ನ್, ಫೆ.15: ಆಸ್ಟ್ರೇಲಿಯದ ಹೊಡಿಬಡಿ ದಾಂಡಿಗ ಆ್ಯರೊನ್ ಫಿಂಚ್ ಮುಂಬರುವ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೊದಲ ಪಂದ್ಯದಲ್ಲಿ ಲಭ್ಯವಿರುವುದಿಲ್ಲ. ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ 31ರ ಹರೆಯದ ಫಿಂಚ್ ಪಂಜಾಬ್ ತಂಡಕ್ಕೆ 6.2 ಕೋ.ರೂ.ಗೆ ಬಿಕರಿಯಾಗಿದ್ದರು. ಫಿಂಚ್ ಸ್ನೇಹಿತ ಹಾಗೂ ಇನ್ನೋರ್ವ ಆಕ್ರಮಣಕಾರಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಡೆಲ್ಲಿ ಡೇರ್ ಡೆವಿಲ್ಸ್ ಐಪಿಎಲ್‌ನಲ್ಲಿ ಆಡಲಿರುವ ಮೊದಲ ಪಂದ್ಯದಿಂದ ದೂರ ಉಳಿಯಲಿದ್ದಾರೆ. ಮ್ಯಾಕ್ಸ್‌ವೆಲ್ 4 ವರ್ಷಗಳ ಕಾಲ ಪಂಜಾಬ್ ತಂಡದಲ್ಲಿ ಆಡಿದ್ದರು. ಈ ವರ್ಷ ಡೆಲ್ಲಿ ತಂಡದಲ್ಲಿ ಆಡಲಿದ್ದಾರೆ. ಡೆಲ್ಲಿ ತಂಡ ಕಳೆದ ತಿಂಗಳು ನಡೆದ ಹರಾಜಿನಲ್ಲಿ 9 ಕೋ.ರೂ.ಗೆ ಮ್ಯಾಕ್ಸ್‌ವೆಲ್‌ರನ್ನು ಖರೀದಿಸಿತ್ತು. 11ನೇ ಆವೃತ್ತಿಯ ಐಪಿಎಲ್ ಎ.7 ರಿಂದ ಆರಂಭವಾಗಲಿದ್ದು, ಎ.9 ರಂದು ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಪಂಜಾಬ್ ತಂಡ ಡೆಲ್ಲಿಯನ್ನು ಮುಖಾಮುಖಿಯಾಗಲಿದೆ.

ಕುತೂಹಲಕಾರಿ ಅಂಶವೆಂದರೆ ಡೆಲ್ಲಿ ಹಾಗೂ ಪಂಜಾಬ್ ಫ್ರಾಂಚೈಸಿಗಳಿಗೆ ಆಸ್ಟ್ರೇಲಿಯದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್ ಹಾಗೂ ಬ್ರಾಡ್ ಹಾಡ್ಜ್ ಕೋಚಿಂಗ್ ನೀಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News