ವಿಟಾಮಿನ್ ಸಿ ತೈಲ ಮೊಡವೆಗಳನ್ನು ನಿವಾರಿಸುತ್ತದೆಯೇ....?

Update: 2018-02-17 09:28 GMT

ಮೊಡವೆ ಎಲ್ಲ ಯುವಜನರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಬಾರಿ ಎದುರಿಸಲೇಬೇಕಾದ ಸಮಸ್ಯೆಯಾಗಿದೆ. ಮೊಡವೆಗಳಿಗೆ ಚಿಕಿತ್ಸೆ ಸುಲಭವಲ್ಲ. ಅದು ಒಮ್ಮೆ ಚರ್ಮದ ಮೇಲೆ ದುಷ್ಪರಿಣಾಮ ಬೀರಿತೆಂದರೆ ಆಗಾಗ್ಗೆ ಏಳುತ್ತಲೇ ಇರುವುದರಿಂದ ಇದರಿಂದ ಪಾರಾಗುವುದೇ ಯುವಜನರಿಗೆ, ವಿಶೇಷವಾಗಿ ಯುವತಿಯರಿಗೆ ದೊಡ್ಡ ಕಷ್ಟವಾಗಿದೆ. ಆದರೆ ಪ್ರಕೃತಿಯು ಪ್ರತಿಯೊಂದಕ್ಕೂ ಚಿಕಿತ್ಸೆಯನ್ನು ಹೊಂದಿದೆ.

ಅತಿಯಾದ ತೈಲ ಉತ್ಪತ್ತಿಯಾದಾಗ ನಮ್ಮ ಚರ್ಮದ ಮೇಲ್ಮೈಯಲ್ಲಿನ ರಂಧ್ರಗಳು ಮುಚ್ಚಿಕೊಳ್ಳುವುದರಿಂದ ಮೊಡವೆಗಳು ಹುಟ್ಟಿಕೊಳ್ಳುತ್ತವೆ. ಸೆಬಮ್ ಅಥವಾ ಮೇದೋಗ್ರಂಥಿಗಳ ಸ್ರಾವ ಹೆಚ್ಚಾಗುವುದರೊಡನೆ ಈ ರಂಧ್ರಗಳಲ್ಲಿರುವ ಬ್ಯಾಕ್ಟೀರಿಯಾ ಗಳೂ ವೃದ್ಧಿಯಾಗುತ್ತವೆ. ಮುಖದ ವಿವಿಧ ಭಾಗಗಳಿಗೆ ಹರಡುವ ಈ ಬ್ಯಾಕ್ಟೀರಿಯಾಗಳು ತಮ್ಮಾಂದಿಗೆ ಮೊಡವೆಗಳನ್ನೂ ಹರಡುತ್ತವೆ. ಹೀಗಾಗಿ ಮೊಡವೆಗಳು ಏಳದಂತಿರಲು ಈ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದು ಅಗತ್ಯವಾಗಿದೆ.

ಮೊಡವೆಗಳ ನಿವಾರಣೆಗಾಗಿ ತಜ್ಞವೈದ್ಯರು ನೀಡುವ ಔಷಧಿಗಳು ಸೆಬಮ್‌ನ್ನು ಒಣಗಿಸುತ್ತವೆ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಆದರೆ ಕೆಲವೊಮ್ಮೆ ಈ ಔಷಧಿಗಳು ಚರ್ಮವನ್ನು ಒಣಗಿಸಿ ವಿರೂಪಗೊಳಿಸುವ ಸಾಧ್ಯತೆಗಳಿರುತ್ತವೆ. ಅಲ್ಲದೆ ಮೊಡವೆಗಳನ್ನು ಗುಣಪಡಿಸಲು ಈ ಔಷಧಿಗಳು ಸುದೀರ್ಘ ಸಮಯವನ್ನು ತೆಗೆದುಕೊಳ್ಳುತ್ತವೆ ಮತ್ತು ಮೊಡವೆಗಳ ವಿರುದ್ಧ ಶಾಶ್ವತ ರಕ್ಷಣೆ ನೀಡುತ್ತವೆ ಎಂಬ ಖಾತರಿಯಿಲ್ಲ. ಹೀಗಾಗಿ ಔಷಧಿಗಳ ಯಾವುದೇ ಅಡ್ಡಪರಿಣಾಮಗಳಿಲ್ಲದ ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರವನ್ನು ಸೂಚಿಸುವುದು ಚರ್ಮರೋಗ ತಜ್ಞರಿಗೂ ಕಷ್ಟವಾಗುತ್ತದೆ.

ವಿಜ್ಞಾನದ ಬಳಿ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರವಿಲ್ಲದಿರಬಹುದು, ಆದರೆ ಪ್ರಕೃತಿಯ ಬಳಿ ವಿಟಾಮಿನ್ ಸಿ ತೈಲದ ರೂಪದಲ್ಲಿ ಖಚಿತ ಪರಿಹಾರವಿದೆ. ವಿಟಾಮಿನ್ ಸಿ ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಲವಾರು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವ ಅದು ವಯಸ್ಸಾಗುವುದನ್ನು ತಡೆಯುತ್ತದೆ. ವಿಶೇಷವಾಗಿ ತೈಲದ ರೂಪದಲ್ಲಿ ವಿಟಾಮಿನ್ ಸಿ ಬಳಸಿದರೆ ಅದು ಮೊಡವೆಗಳ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಯಾವುದೇ ಬಗೆಯ ಎಣ್ಣೆ ಮೊಡವೆಗಳನ್ನು ಹೆಚ್ಚಿಸುತ್ತದೆ ಎಂಬ ಭಾವನೆ ಹೆಚ್ಚಿನವರಲ್ಲಿ ಇದೆ, ಆದರೆ ವಿಟಾಮಿನ್ ಸಿ ತೈಲದ ವಿಷಯದಲ್ಲಿ ಇದು ಸತ್ಯವಲ್ಲ.

ಅದು ಮೊಡವೆಗಳನ್ನು ಹೇಗೆ ನಿವಾರಿಸುತ್ತದೆ ಎನ್ನುವ ಬಗ್ಗೆ ಮಾಹಿತಿಗಳಿಲ್ಲಿವೆ...

► ಚರ್ಮವನ್ನು ಶುದ್ಧಗೊಳಿಸುತ್ತದೆ ವಿಟಾಮಿನ್ ಸಿ ಬ್ಯಾಕ್ಟೀರಿಯಾ ನಿರೋಧಕ ಗುಣವನ್ನು ಹೊಂದಿರುವುದರಿಂದ ಸಮಸ್ಯೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುವಲ್ಲಿ ನೆರವಾಗುತ್ತದೆ. ಚರ್ಮದ ಮೇಲ್ಮೈಯಲ್ಲಿನ ಕೊಳೆಯನ್ನೂ ಅದು ತೆಗೆದು ಸ್ವಚ್ಛಗೊಳಿಸುತ್ತದೆ.

► ಅದು ರಂಧ್ರಗಳನ್ನು ಮುಚ್ಚುವುದಿಲ್ಲವಿಟಾಮಿನ್ ಸಿ ನಿಜವಾಗಿಯೂ ಮೊಡವೆಗಳಿಂದ ಬಾಧಿತ ಚರ್ಮಕ್ಕೆ ವರದಾನ ವಾಗಿದೆ. ಅದು ಇತರ ತೈಲಗಳಂತೆ ಅಥವಾ ಸೌಂದರ್ಯವರ್ಧಕಗಳಂತೆ ಮುಖದ ಚರ್ಮದ ಮೇಲಿನ ರಂಧ್ರಗಳನ್ನು ಮುಚ್ಚುವುದಿಲ್ಲ ಮತ್ತು ಇನ್ನಷ್ಟು ಮೊಡವೆಗಳು ಏಳುವುದನ್ನು ಕಡಿಮೆಗೊಳಿಸುತ್ತದೆ.

► ಚರ್ಮಕ್ಕಾದ ಹಾನಿಯನ್ನು ಗುಣಪಡಿಸುತ್ತದೆವಿಟಾಮಿನ್ ಸಿ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಅದು ಶರೀರವು ಯಾವುದೇ ಸೋಂಕುಗಳಿಂದ ಚೇತರಿಸಿಕೊಳ್ಳಲು ನೆರವಾಗುತ್ತದೆ ಮತ್ತು ಮೊಡವೆಗಳಿಂದ ಚರ್ಮಕ್ಕೆ ಆಗಿರುವ ಹಾನಿಯನ್ನು ಗುಣಪಡಿಸುತ್ತದೆ.

► ಉರಿಯೂತವನ್ನು ಕಡಿಮೆ ಮಾಡುತ್ತದೆಲೋಮನಾಳಗಳಿಂದ ರಕ್ತವು ಚರ್ಮದ ಮೇಲ್ಮೈಗೆ ಸಾಗುವುದರಿಂದ ಮೊಡವೆ ಉಂಟಾದ ಜಾಗವು ಕೆಂಪಗಾಗುತ್ತದೆ. ವಿಟಾಮಿನ್ ಸಿ ತೈಲವು ಹೀಗೆ ಸಾಗುವ ರಕ್ತದ ಪ್ರಮಾಣವನ್ನು ಕಡಿಮೆಗೊಳಿಸುವ ಮೂಲಕ ಕೆಂಪುಛಾಯೆಯನ್ನು ತಗ್ಗಿಸುತ್ತದೆ.

► ಚರ್ಮವು ಸುಲಭವಾಗಿ ಹೀರಿಕೊಳ್ಳುತ್ತದೆವಿಟಾಮಿನ್ ಸಿ ತೈಲವನ್ನು ಚರ್ಮವು ಸುಲಭವಾಗಿ ಹೀರಿಕೊಳ್ಳುತ್ತದೆ. ಅದು ಚರ್ಮದ ಆಳವನ್ನು ಪ್ರವೇಶಿಸಿ ಮೂಲದಲ್ಲಿಯೇ ಮೊಡವೆಯ ಅವಶೇಷಗಳನ್ನು ತೆಗೆದುಹಾಕುತ್ತದೆ.

► ಸೆಬಮ್ ಉತ್ಪತ್ತಿಯನ್ನು ತಗ್ಗಿಸುತ್ತದೆತೈಲವು ತೈಲವನ್ನು ಕೊಲ್ಲುತ್ತದೆ. ವಿಟಾಮಿನ್ ಸಿ ತೈಲವು ಈಗಾಗಲೇ ಚರ್ಮದ ಮೇಲಿರುವುದರಿಂದ ಮೇದೋಗ್ರಂಥಿಗಳು ಹೆಚ್ಚಿನ ಎಣ್ಣೆಯನ್ನು ಸ್ರವಿಸುವುದಿಲ್ಲ ಮತ್ತು ಇದರೊಂದಿಗೆ ಮೊಡವೆಗಳು ಏಳುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

► ಮೊಡವೆಯ ಕಲೆಗಳನ್ನು ಕಡಿಮೆ ಮಾಡುತ್ತದೆವಿಟಾಮಿನ್ ಸಿ ತೈಲವು ಮೊಡವೆಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲ, ಅವುಗ ಳಿಂದುಂಟಾಗುವ ಕಲೆಗಳನ್ನು ನಿವಾರಿಸಲೂ ನೆರವಾಗುತ್ತದೆ. ಹೀಗಾಗಿ ಮೊಡವೆಗಳು ನಿವಾರಣೆಯಾದ ಬಳಿಕವೂ ಅದನ್ನು ಬಳಸುವುದರಿಂದ ಚರ್ಮವನ್ನು ರಕ್ಷಿಸಿಕೊಳ್ಳ ಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News