ಕುರ್ದಿಶ್ ಪ್ರದೇಶಗಳ ಮೇಲೆ ಟರ್ಕಿ ರಾಸಾಯನಿಕ ದಾಳಿ?

Update: 2018-02-17 17:37 GMT

ಬೈರೂತ್, ಫೆ. 17: ಸಿರಿಯದ ಅಫ್ರಿನ್‌ನಲ್ಲಿರುವ ಕುರ್ದಿಶ್ ನಿಯಂತ್ರಣದ ಪ್ರದೇಶದ ಮೇಲೆ ಟರ್ಕಿ ದಾಳಿ ನಡೆಸಿದ ಬಳಿಕ 6 ನಾಗರಿಕರು ಉಸಿರಾಟದ ತೊಂದರೆಯನ್ನು ಎದುರಿಸುತ್ತಿದ್ದಾರೆ ಎಂದು ಸಿರಿಯ-ಕುರ್ದಿಶ್ ಸುದ್ದಿ ಸಂಸ್ಥೆಗಳು ಮತ್ತು ಸಿರಿಯದ ಸರಕಾರಿ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.

ಇದು ವಿಷಾನಿಲ ಸೇವನೆಯ ಪರಿಣಾಮದಿಂದ ಆಗಿರಬಹುದು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಉಸಿರಾಟದ ತೊಂದರೆ ಎದುರಿಸುತ್ತಿರುವ, ವಾಂತಿ ಮಾಡುತ್ತಿರುವ ಮತ್ತು ಚರ್ಮದಲ್ಲಿ ಗುಳ್ಳೆಗಳು ಎದ್ದಿರುವ ರೋಗಿಗಳಿಗೆ ಚಿಕಿತ್ಸೆ ನೀಡಿರುವುದಾಗಿ ಸ್ಥಳೀಯ ವೈದ್ಯರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News