ಊಟವಾದ ತಕ್ಷಣ ನೀರನ್ನು ಕುಡಿಯಬೇಡಿ: ಕಾರಣ ಇಲ್ಲಿದೆ…

Update: 2018-02-18 11:29 GMT

ವ್ಯಕ್ತಿಯೋರ್ವ ಪ್ರತಿದಿನ ಎಂಟು ಗ್ಲಾಸ್ ನೀರು ಕುಡಿಯಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಆದರೆ ನೀರು ಕುಡಿಯಲು ಸೂಕ್ತವಾದ ಸಮಯ ಯಾವುದು? ಆದರೆ ಒಂದಂತೂ ನಿಜ, ಊಟವಾದ ತಕ್ಷಣ ನಿರನ್ನು ಕುಡಿಯಲೇಬಾರದು. ಶರೀರದ ಮೇಲೆ ನೀರು ಸೇವನೆಯ ಗರಿಷ್ಠ ಪರಿಣಾಮವನ್ನು ಪಡೆಯಲು ಅತ್ಯುತ್ತಮ ಸಮಯ ಯಾವುದು ಮತ್ತು ಹಾನಿಕಾರಕ ಪರಿಣಾಮಗಳನ್ನು ತಡೆಯಲು ನೀರನ್ನು ಸೇವಿಸಬಾರದ ಸಮಯದ ಬಗ್ಗೆ ಇಲ್ಲಿದೆ ಮಾಹಿತಿ...

ಬೆಳಿಗ್ಗೆ ಎದ್ದ ಬಳಿಕ ಒಂದು ಗ್ಲಾಸ್ ನೀರಿನ ಸೇವನೆಯು ಆಂತರಿಕ ಅಂಗಾಂಗಗಳನ್ನು ಕ್ರಿಯಾಶೀಲಗೊಳಿಸಲು ಮತ್ತು ಶರೀರದಲ್ಲಿಯ ಯಾವುದೇ ವಿಷವನ್ನು ಹೊರಗೆ ಹಾಕಲು ನೆರವಾಗುತ್ತದೆ.

ಊಟಕ್ಕೆ ಅರ್ಧ ಗಂಟೆ ಮೊದಲು ಒಂದು ಗ್ಲಾಸ್ ನೀರನ್ನು ಸೇವಿಸುವುದು ಒಳ್ಳೆಯದು. ಅದು ನಾವು ತಿಂದ ಆಹಾರವು ಜೀರ್ಣಗೊಳ್ಳಲು ಸಹಕಾರಿಯಾಗುತ್ತದೆ.

ಊಟಕ್ಕೆ ಕೆಲವೇ ಕ್ಷಣಗಳ ಮೊದಲು ಮತ್ತು ಊಟವಾದ ತಕ್ಷಣ ನೀರನ್ನು ಸೇವಿಸಬಾರದು. ಹಾಗೆ ಮಾಡುವುದರಿಂದ ನೀರು ಜೀರ್ಣ ರಸಗಳನ್ನು ದುರ್ಬಲ ಗೊಳಿಸುತ್ತದೆ ಮತ್ತು ನಮ್ಮ ಶರೀರವು ಪೋಷಕಾಂಶಗಳನ್ನು ಹೀರಿಕೊಳ್ಳಲು ಅವಕಾಶ ನೀಡುವುದಿಲ್ಲ.

ಸ್ನಾನಕ್ಕೆ ಮೊದಲು ಒಂದು ಗ್ಲಾಸ್ ನೀರನ್ನು ಸೇವಿಸುವುದು ರಕ್ತದೊತ್ತಡವನ್ನು ತಗ್ಗಿಸಲು ಪೂರಕವಾಗುತ್ತದೆ.

ರಾತ್ರಿ ಮಲಗುವ ಮುನ್ನ ಒಂದು ಗ್ಲಾಸ್ ನೀರು ಕುಡಿದರೆ ಅದು ಬೆಳಿಗ್ಗೆ ನಾವು ಎದ್ದೇಳುವವರೆಗೆ ಉಂಟಾಗುವ ನೀರಿನ ಕೊರತೆಯನ್ನು ಭರ್ತಿ ಮಾಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News