ಇಸ್ರೇಲನ್ನು ಪರೀಕ್ಷಿಸಬೇಡಿ: ಇರಾನ್‌ಗೆ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ

Update: 2018-02-18 18:09 GMT

ಮ್ಯೂನಿಕ್ (ಜರ್ಮನಿ), ಫೆ. 18: ಇಸ್ರೇಲ್‌ನ ವಾಯುಪ್ರದೇಶದಲ್ಲಿ ಇರಾನ್‌ನ ಡ್ರೋನ್ ಒಂದನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಂಥ ‘ಆಕ್ರಮಣಕಾರಿ ಮನೋಭಾವ’ದ ವಿರುದ್ಧ ಇರಾನ್‌ಗೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.

 ಜರ್ಮನಿಯಲ್ಲಿ ನಡೆದ ಮ್ಯೂನಿಕ್ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಟೆಹರಾನ್‌ನ ನಿರಂಕುಶಾಧಿಕಾರಿಗಳಿಗೆ ತನ್ನದೊಂದು ಸಂದೇಶವಿದೆ ಎಂದರು ಹಾಗೂ ‘‘ಇಸ್ರೇಲ್‌ನ ಸಂಕಲ್ಪವನ್ನು ಪರೀಕ್ಷಿಸಬೇಡಿ’’ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಆಯತಾಕಾರದ ಕಡು ಹಸಿರು ಲೋಹದ ತುಂಡೊಂದನ್ನು ಪ್ರದರ್ಶಿಸಿದ ಅವರು, ‘‘ಇದು ನಾವು ಹೊಡೆದುರುಳಿಸಿದ ಇರಾನ್‌ನ ಡ್ರೋನ್‌ನ ಅಳಿದುಳಿದ ಭಾಗ’’ ಎಂದರು.

ಫೆಬ್ರವರಿ 10ರಂದು ಸಿರಿಯ ಮೂಲಕ ಇಸ್ರೇಲ್ ಪ್ರವೇಶಿಸಿದ ಡ್ರೋನನ್ನು ಹೊಡೆದುರುಳಿಸಲಾಗಿತ್ತು ಎಂದು ಬೆಂಜಮಿನ್ ನುಡಿದರು.

ಡ್ರೋನನ್ನು ಹೊಡೆದುರುಳಿಸಿದ ಬೆನ್ನಿಗೇ ಇಸ್ರೇಲ್ ‘ಸಿರಿಯಲ್ಲಿರುವ ಇರಾನ್‌ನ ನಿಯಂತ್ರಣ ವ್ಯವಸ್ಥೆಗಳ ಮೇಲೆ ದಾಳಿಗಳನ್ನು ನಡೆಸಿತ್ತು.

ದಾಳಿಗಳ ವೇಳೆ, ಇಸ್ರೇಲ್‌ನ ಒಂದು ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಲಾಗಿತ್ತು. ಇದು ಯುದ್ಧವೊಂದರಲ್ಲಿ ಇಸ್ರೇಲ್ ತನ್ನ ವಿಮಾನವನ್ನು ಕಳೆದುಕೊಂಡಿರುವುದು 1982ರ ಬಳಿಕ ಮೊದಲ ಬಾರಿ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News