ಹತ್ಯಾಕಾಂಡ: ಎಫ್‌ಬಿಐ ವಿರುದ್ಧ ಕಿಡಿಗಾರಿದ ಟ್ರಂಪ್

Update: 2018-02-18 18:11 GMT

ವೆಸ್ಟ್ ಪಾಮ್ ಬೀಚ್ (ಅಮೆರಿಕ), ಫೆ. 18: ಫ್ಲೋರಿಡ ಶಾಲೆಯಲ್ಲಿ ನಡೆದ ಗುಂಡು ಹಾರಾಟಕ್ಕೆ ಸಂಬಂಧಿಸಿ ಎಫ್‌ಬಿಐ ವಿರುದ್ಧ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಗಾರಿದ್ದಾರೆ. ‘‘ಶಂಕಿತನು ನೀಡಿರುವ ಎಲ್ಲ ಸೂಚನೆಗಳನ್ನು ನೀವು ನಿರ್ಲಕ್ಷಿಸಿದ್ದೀರಿ ಹಾಗೂ ಟ್ರಂಪ್ ಪ್ರಚಾರ ತಂಡದೊಂದಿಗೆ ರಶ್ಯ ಶಾಮೀಲಾಗಿರುವುದನ್ನು ಸಾಧಿಸಲು ಎಲ್ಲ ಸಮಯವನ್ನು ತೆಗೆದುಕೊಳ್ಳುತ್ತಿದ್ದೀರಿ’’ ಎಂದು ಅವರು ಹೇಳಿದ್ದಾರೆ.

‘‘ಇದು ಸ್ವೀಕಾರಾರ್ಹವಲ್ಲ. ಟ್ರಂಪ್ ಪ್ರಚಾರ ತಂಡದೊಂದಿಗೆ ರಶ್ಯದ ಶಾಮೀಲಾತಿಯನ್ನು ಸಾಬೀತುಪಡಿಸಲು ಪ್ರಯತ್ನಿಸಲು ಅವರು ತುಂಬಾ ಸಮಯವನ್ನು ವ್ಯಯಿಸುತ್ತಿದ್ದಾರೆ. ಅಲ್ಲಿ ಶಾಮೀಲಾತಿಯೇ ಇಲ್ಲ. ನೀವು ನಿಮ್ಮ ಮೂಲ ಕರ್ತವ್ಯಕ್ಕೆ ಮರಳಿ ಹಾಗೂ ಮತ್ತೆ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿ!’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

 ಫ್ಲೋರಿಡ ಶಾಲೆಯಲ್ಲಿ ನಡೆದ ಹತ್ಯಾಕಾಂಡದ ಶಂಕಿತ ಕೊಲ್ಲುವ ಹಾಗೂ ಬಂದೂಕುಗಳನ್ನು ಹೊಂದುವ ಇಚ್ಛೆಯನ್ನು ಹೊಂದಿದ್ದಾನೆ ಹಾಗೂ ಆತ ದಾಳಿ ನಡೆಸಲು ಸಂಚು ರೂಪಿಸುತ್ತಿರಬಹುದು ಎಂಬ ಸಂದೇಶವೊಂದನ್ನು ಎಫ್‌ಬಿಐ ಕಳೆದ ತಿಂಗಳು ಸ್ವೀಕರಿಸಿತ್ತು.

ಆದರೆ, ಏಜಂಟ್‌ಗಳು ಅದರ ಬಗ್ಗೆ ತನಿಖೆ ನಡೆಸುವಲ್ಲಿ ವಿಫಲರಾದರು ಎಂದು ಎಫ್‌ಬಿಐ ಶುಕ್ರವಾರ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News