ಇರಾನನ್ನು ಭದ್ರತಾ ಮಂಡಳಿ ಖಂಡಿಸಲಿ: ಬ್ರಿಟನ್, ಅಮೆರಿಕ, ಫ್ರಾನ್ಸ್

Update: 2018-02-18 18:13 GMT

ವಿಶ್ವಸಂಸ್ಥೆ, ಫೆ. 18: ತನ್ನ ಪ್ರಕ್ಷೇಪಕ ಕ್ಷಿಪಣಿಗಳು ಯಮನ್‌ನ ಹೌದಿ ಬಂಡುಕೋರರಿಗೆ ಸಿಗುವುದನ್ನು ತಪ್ಪಿಸಲು ಕ್ರಮಗಳನ್ನು ತೆಗೆದುಕೊಳ್ಳದ ಇರಾನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಖಂಡಿಸಬೇಕು ಹಾಗೂ ದಿಗ್ಬಂಧನಗಳ ಉಲ್ಲಂಘನೆ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿ ಬ್ರಿಟನ್, ಅಮೆರಿಕ ಮತ್ತು ಫ್ರಾನ್ಸ್ ಬಯಸಿವೆ.

ಈ ಸಂಬಂಧ ಈ ದೇಶಗಳು ನಿರ್ಣಯವೊಂದನ್ನು ಮಂಡಿಸಲು ಉದ್ದೇಶಿಸಿವೆ.

ಯಮನ್ ವಿರುದ್ಧ ವಿಧಿಸಲಾಗಿರುವ ದಿಗ್ಬಂಧನಗಳನ್ನು ಇನ್ನೂ ಒಂದು ವರ್ಷ ವಿಸ್ತರಿಸಬೇಕು ಎಂಬುದಾಗಿಯೂ ನಿರ್ಣಯ 15 ಸದಸ್ಯರ ಭದ್ರತಾ ಮಂಡಳಿಯನ್ನು ಒತ್ತಾಯಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News