ಬ್ರಿಟನ್‌ನಲ್ಲಿ ದಶಕದಲ್ಲೇ ಪ್ರಬಲ ಭೂಕಂಪ

Update: 2018-02-18 18:15 GMT

ಲಂಡನ್, ಫೆ. 18: ದಶಕದಲ್ಲೇ ಪ್ರಬಲ ಭೂಕಂಪವೊಂದು ಬ್ರಿಟನ್‌ನಲ್ಲಿ ಶನಿವಾರ ಸಂಭವಿಸಿದೆ ಎಂದು ಬ್ರಿಟಿಶ್ ಜಿಯಾಲಜಿಕಲ್ ಸರ್ವೆ (ಬಿಜಿಎಸ್) ಶನಿವಾರ ತಿಳಿಸಿದೆ. ವೇಲ್ಸ್ ಮತ್ತು ನೈರುತ್ಯ ಇಂಗ್ಲೆಂಡ್‌ನ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿತು. ಆದಾಗ್ಯೂ, ಗಂಭೀರ ಪ್ರಮಾಣದ ಹಾನಿಯೇನೂ ಸಂಭವಿಸಿಲ್ಲ.

ರಿಕ್ಟರ್ ಮಾಪಕದಲ್ಲಿ 4.4ರಷ್ಟಿದ್ದ ತೀವ್ರತೆಯ ಭೂಕಂಪದ ಕೇಂದ್ರ ಬಿಂದು ಸ್ವನ್ಸಿಯ ನಗರದ ಉತ್ತರಕ್ಕೆ 20 ಕಿ.ಮೀ. ದೂರದಲ್ಲಿತ್ತು. ಅದು 2008ರ ಬಳಿಕ ಬ್ರಿಟನ್‌ನಲ್ಲಿ ಸಂಭವಿಸಿದ ಹೆಚ್ಚಿನ ತೀವ್ರತೆಯ ಭೂಕಂಪವಾಗಿದೆ.

ಆದಾಗ್ಯೂ, ವೇಲ್ಸ್‌ನಲ್ಲಿ 200 ಕಿ.ಮೀ.ಗಿಂತಲೂ ಹೆಚ್ಚಿನ ದೂರದಲ್ಲಿರುವ ಐಲ್ ಆಫ್ ವೈಟ್‌ನಲ್ಲಿರುವ ಕ್ಯಾರಿಸ್‌ಬ್ರೂಕ್ ಕ್ಯಾಸಲ್‌ನಲ್ಲೂ ಕಂಪನ ಅನುಭವಕ್ಕೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News