ವಿಶ್ವಸಂಸ್ಥೆಯ ಮಧ್ಯಸ್ಥಿಕೆ ಪ್ರಸ್ತಾವ ತಿರಸ್ಕರಿಸಿದ ಮಾಲ್ದೀವ್ಸ್ ಅಧ್ಯಕ್ಷ

Update: 2018-02-22 17:28 GMT

ವಿಶ್ವಸಂಸ್ಥೆ, ಫೆ. 22: ಮಾಲ್ದೀವ್ಸ್‌ನಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನಲ್ಲಿ ಅಧ್ಯಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಮಧ್ಯವರ್ತಿಯಾಗುವ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್‌ರ ಪ್ರಸ್ತಾವವನ್ನು ಅಧ್ಯಕ್ಷ ಅಬ್ದುಲ್ಲಾ ಯಮೀನ್ ತಿರಸ್ಕರಿಸಿದ್ದಾರೆ ಎಂದು ಗುಟರಸ್‌ರ ಉಪ ವಕ್ತಾರ ಫರ್ಹಾನ್ ಹಕ್ ಹೇಳಿದ್ದಾರೆ.

‘‘ಬಿಕ್ಕಟ್ಟಿನಲ್ಲಿ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸುವ ಪ್ರಸ್ತಾವವನ್ನು ಗುಟರಸ್ ಅಧ್ಯಕ್ಷ ಯಮೀನ್ ಮುಂದಿಟ್ಟರು. ಆದರೆ, ಈ ಹಂತದಲ್ಲಿ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂಬ ಸಂದೇಶವನ್ನು ಅಧ್ಯಕ್ಷರು ನೀಡಿದ್ದಾರೆ’’ ಎಂದು ಹಕ್ ಬುಧವಾರ ತಿಳಿಸಿದರು.

ಮಾಲ್ದೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ 30 ದಿನಗಳಿಗೆ ವಿಸ್ತರಣೆಯಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಕ್ತಾರ, ‘‘ಮಾಲ್ದೀವ್ಸ್‌ನ ಪರಿಸ್ಥಿತಿಯನ್ನು ಮಹಾಕಾರ್ಯದರ್ಶಿ ನಿಕಟವಾಗಿ ಹಾಗೂ ಕಳವಳದಿಂದ ಗಮನಿಸುತ್ತಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News