ಅಳುತ್ತಿದ್ದ ಮಗುವನ್ನು ಕಸದ ರಾಶಿಗೆ ಎಸೆದ ತಾಯಿ : ಮಗು ಮೃತ್ಯು

Update: 2018-02-25 09:10 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಫೆ.25: ಅಳುವುದು ಸಹಿಸಲಾಗದೆ ತಾಯಿಯೇ 25 ದಿನದ ಮಗುವನ್ನು ಕಸದ ರಾಶಿಗೆ ಎಸೆದು ಕೊಂದು ಹಾಕಿದ ಘಟನೆ ದೆಹಲಿಯ ವಿನೋದ್ ನಗರದಲ್ಲಿ ನಡೆದಿದೆ.

ಮಗು ನಿರಂತರ ಅಳುತ್ತಿತ್ತು, ಅಳು ನಿಲ್ಲಿಸದಿದ್ದುದರಿಂದ ಕೋಪಗೊಂಡ ತಾಯಿ ಮಗುವನ್ನು ಕಸದ ರಾಶಿಗೆ ಎಸೆದಿದ್ದು,ಪರಿಣಾಮ ಮಗು ಮೃತಪಟ್ಟಿದೆ.

ಮಗುವಿನ ತಾಯಿಯನ್ನು ಬಂಧಿಸಲಾಗಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News