ರಾಹುಲ್ ದ್ರಾವಿಡ್ ಬೇಡಿಕೆ ಒಪ್ಪಿದ ಬಿಸಿಸಿಐ

Update: 2018-02-25 18:47 GMT

   ಹೊಸದಿಲ್ಲಿ, ಫೆ.25: ವಿಶ್ವಕಪ್ ಜಯಿಸಿದ ಭಾರತದ ಅಂಡರ್ -19 ತಂಡದ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಅವರ ಬಳಗದ ಕೋಚಿಂಗ್ ಸಿಬ್ಬಂದಿಗಳಿಗೆ ತಲಾ 25 ಲಕ್ಷ ರೂ. ನಗದು ಪುರಸ್ಕಾರ ದೊರೆಯಲಿದೆ.

    ಭಾರತದ ಅಂಡರ್-19 ತಂಡ ವಿಶ್ವಕಪ್ ಜಯಿಸಿದ ಬೆನ್ನಲ್ಲೇ ಬಿಸಿಸಿಐ ತಂಡದ ಕೋಚ್ ರಾಹುಲ್ ದ್ರಾವಿಡ್‌ಗೆ 50 ಲಕ್ಷ ರೂ, ಆಟಗಾರರಿಗೆ 30 ಲಕ್ಷ ರೂ. ಮತ್ತು ಕೋಚಿಂಗ್ ಸಿಬ್ಬಂದಿಗಳಿಗೆ ತಲಾ 20 ಲಕ್ಷ ರೂ. ನಗದು ಬಹುಮಾನ ಪ್ರಕಟಿಸಿತ್ತು.

ರಾಹುಲ್ ದ್ರಾವಿಡ್ ಅವರು    ಬಿಸಿಸಿಐ ತಮಗೆ ಎಲ್ಲರಿಗಿಂತ ಹೆಚ್ಚು ಮೊತ್ತದ ನಗದು ಬಹುಮಾನ ಪ್ರಕಟಿಸಿದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿ ತಂಡದ ಯಶಸ್ಸಿಗೆ ಎಲ್ಲರೂ ಶ್ರಮಿಸಿರುವ ಹಿನ್ನೆಲೆಯಲ್ಲಿ ನಗದು ಬಹುಮಾನ ಎಲ್ಲರಿಗೂ ಒಂದೇ ರೀತಿ ಇರಬೇಕು. ತಮಗೆ ನೀಡುವ ನಗದು ಬಹುಮಾನದ ಮೊತ್ತವನ್ನು ಕಡಿಮೆ ಮಾಡಿ. ತಮ್ಮನ್ನು ಹಾಗೂ ಕೋಚಿಂಗ್ ಬಳಗದ ಸದಸ್ಯರನ್ನು ಸಮಾನವಾಗಿ ಪರಿಗಣಿಸುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು.

ದ್ರಾವಿಡ್ ಅವರ ನಿಲುವಿನ ಬಗ್ಗೆ ಬಿಸಿಸಿಐ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದ್ದರೂ, ಇದೀಗ ಅವರ ಮನವಿಯನ್ನು ಒಪ್ಪಿಕೊಂಡಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News