×
Ad

ತಕ್ಷಣಕ್ಕೆ ಹಾನಿಯಿಲ್ಲ:ಉಕ್ಕು ಆಮದಿನ ಮೇಲೆ ಟ್ರಂಪ್ ನಿರ್ಬಂಧಕ್ಕೆ ಭಾರತದ ಪ್ರತಿಕ್ರಿಯೆ

Update: 2018-03-02 21:01 IST

ಹೊಸದಿಲ್ಲಿ,ಮಾ.2: ಉಕ್ಕು ಆಮದುಗಳ ಮೇಲೆ ನಿರ್ಬಂಧ ಹೇರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರವು ತಕ್ಷಣಕ್ಕೆ ಯಾವುದೇ ದುಷ್ಪರಿಣಾಮವನ್ನು ಬೀರುವುದಿಲ್ಲ ಎಂದು ಭಾರತವು ನಿರೀಕ್ಷಿಸಿದೆ ಎಂದು ಉಕ್ಕು ಸಚಿವಾಲಯದ ಕಾರ್ಯದರ್ಶಿ ಅರುಣಾ ಶರ್ಮಾ ಅವರು ಶುಕ್ರವಾರ ಇಲ್ಲಿ ಸುದ್ದಿಸಂಸ್ಥೆಗೆ ತಿಳಿಸಿದರು.

ಅಮೆರಿಕದ ಉತ್ಪಾದಕರನ್ನು ರಕ್ಷಿಸಲು ಉಕ್ಕು ಮತ್ತು ಅಲ್ಯುಮಿನಿಯಂ ಆಮದುಗಳ ಮೇಲೆ ತಾನು ಭಾರೀ ಸುಂಕವನ್ನು ಹೇರುವುದಾಗಿ ಟ್ರಂಪ್ ಗುರುವಾರ ಪ್ರಕಟಿಸಿದ್ದರು.

ನಮ್ಮ ರಫ್ತುಗಳಲ್ಲಿ ಕೇವಲ ಶೇ.2ರಷ್ಟು ಮಾತ್ರ ಅಮೆರಿಕಕ್ಕೆ ರವಾನೆಯಾಗುತ್ತಿದೆ. ಹೀಗಾಗಿ ತಕ್ಷಣಕ್ಕೆ ಯಾವುದೇ ಹಾನಿಯ ಸಾಧ್ಯತೆಯಿಲ್ಲ ಎಂದು ಶರ್ಮಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News