×
Ad

ಏಶ್ಯನ್ ಕುಸ್ತಿ ಚಾಂಪಿಯನ್ ಶಿಪ್ : ಭಾರತದ ಕೌರ್‌ಗೆ ಚಿನ್ನ, ಸಾಕ್ಷಿಗೆ ಕಂಚು

Update: 2018-03-02 22:59 IST

ಬಿಶ್‌ಕೆಕ್, ಮಾ.2: ಇಲ್ಲಿ ನಡೆಯುತ್ತಿರುವ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ಭಾರತದ ಖ್ಯಾತ ಮಹಿಳಾ ಕುಸ್ತಿಪಟು ನವ್‌ಜೋತ್ ಕೌರ್ ಚಿನ್ನ ಮತ್ತು ಒಲಿಂಪಿಕ್ಸ್‌ನಲ್ಲಿ ಕಂಚು ಪಡೆದ ಸಾಕ್ಷಿ ಮಲಿಕ್ ಅವರು ಕಂಚು ಪಡೆದಿದ್ದಾರೆ.

ನವ್‌ಜೋತ್ ಕೌರ್ ಅವರು ಮಹಿಳೆಯರ 65 ಕೆ.ಜಿ ವಿಭಾಗದಲ್ಲಿ ಫ್ರೀಸ್ಟೈಲ್‌ನ ಫೈನಲ್‌ನಲ್ಲಿ ಜಪಾನ್‌ನ ಮಿಯಾ ಇಮಾಯಿ ಅವರನ್ನು 9-1 ಅಂತರದಲ್ಲಿ ಬಗ್ಗು ಬಡಿದು ಚಿನ್ನದ ನಗೆ ಬೀರಿದರು.

 62 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲಿಕ್ ಅವರು ಕಝಕಿಸ್ತಾನದ ಅಯ್ಯುಲಿಯಮ್ ಕ್ಯಾಸಿಮೊವಾ ವಿರುದ್ಧ 10-7 ಅಂತರದಲ್ಲಿ ಕಠಿಣ ಹೋರಾಟದಲ್ಲಿ ಕಂಚು ಪಡೆದರು.

ಇದರೊಂದಿಗೆ ಭಾರತ ಕೂಟದಲ್ಲಿ 1 ಚಿನ್ನ, 1 ಬೆಳ್ಳಿ ಮತ್ತು 4 ಕಂಚು ಸೇರಿದಂತೆ ಈ ತನಕ ಒಟ್ಟು 6 ಪದಕಗಳನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News