2500ಕ್ಕೂ ಅಧಿಕ ಭಾರತೀಯ ಮೀನುಗಾರರನ್ನು ಬೆನ್ನಟ್ಟಿದ ಶ್ರೀಲಂಕಾ ನೌಕಾಪಡೆ

Update: 2018-03-04 17:48 GMT

 ಕೊಲಂಬೊ,ಮಾ.4: ಕಚ್ಚಿತೀವು ಸಮೀಪ ಮೀನುಗಾರಿಕೆಯಲ್ಲಿ ತೊಡಗಿದ್ದ 2500ಕ್ಕೂ ಅಧಿಕ ಭಾರತೀಯ ಮೀನುಗಾರರನ್ನು ಶ್ರೀಲಂಕಾಪಡೆಗಳು ಬೆನ್ನಟ್ಟಿ ಓಡಿಸಿರುವುದಾಗಿ ಮೀನುಗಾರರ ಸಂಘಟನೆಯ ನಾಯಕರೊಬ್ಬರು ಆಪಾದಿಸಿದ್ದಾರೆ.

ಕಚ್ಚಿತೀವು ಸಮೀಪ ಶ್ರೀಲಂಕಾದ ಸಾಗರ ಪ್ರದೇಶದಲ್ಲಿ ಮೀನುಗಾರಿಕೆ ನಡೆಸದಂತೆ ಶ್ರೀಲಂಕಾದ ನೌಕಾ ಸಿಬ್ಬಂದಿ ಭಾರತೀಯ ಮೀನುಗಾರರಿಗೆ ಎಚ್ಚರಿಕೆ ನೀಡಿದರು ಹಾಗೂ 20 ದೋಣಿಗಳಲ್ಲಿದ್ದ ಬಲೆಗಳನ್ನು ವಶಕ್ಕೆ ತೆಗೆದುಕೊಂಡರೆಂದು ಮೂಲಗಳು ತಿಳಿಸಿವೆ.

ಶನಿವಾರ 485ಕ್ಕೂ ಅಧಿಕ ಯಾಂತ್ರಿಕೃತ ಬೋಟುಗಳಲ್ಲಿ ಭಾರತೀಯ ಮೀನುಗಾರರು ಕಚ್ಚಿತೀವು ಬಳಿಕ ಮೀನುಗಾರಿಕೆ ನಡೆಸುತ್ತಿದ್ದರೆಂದು ಅವು ಹೇಳಿವೆ. ಕಳೆದ ಫೆಬ್ರವರಿ 11ರಂದು ಕಚ್ಚಿತೀವು ದ್ವೀಪದ ಬಳಿ ಮೀನುಗಾರಿಕೆ ನಡೆಸುತ್ತಿದ್ದ 3 ಸಾವಿರ ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಸಿಬ್ಬಂದಿ ಬೆನ್ನಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News