×
Ad

ಭಾರತ-ಇಂಗ್ಲೆಂಡ್ ಪಂದ್ಯ 1-1 ಡ್ರಾ

Update: 2018-03-04 23:56 IST

ಇಪೋ(ಮಲೇಷ್ಯಾ), ಮಾ.4: ಸುಲ್ತಾನ್ ಅಝ್ಲಾನ್ ಶಾ ಕಪ್ ಹಾಕಿ ಟೂರ್ನಮೆಂಟ್‌ನಲ್ಲಿ ರವಿವಾರ ನಡೆದ ತನ್ನ ಎರಡನೇ ಗ್ರೂಪ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 1-1 ಅಂತರದಿಂದ ಡ್ರಾ ಸಾಧಿಸಿದೆ.

14ನೇ ನಿಮಿಷದಲ್ಲಿ ಶೀಲಾನಂದ ಲಾಕ್ರಾ ಬಾರಿಸಿದ ಗೋಲಿನ ನೆರವಿನಿಂದ ಭಾರತ ಮೊದಲ ಕ್ವಾರ್ಟರ್‌ನಲ್ಲಿ 1-0 ಮುನ್ನಡೆ ಸಾಧಿಸಿತು. ಭಾರತಕ್ಕೆ ಪಂದ್ಯವನ್ನು ಜಯಿಸಿ ಮೂರಂಕವನ್ನು ಗಳಿಸುವ ಉತ್ತಮ ಅವಕಾಶ ಲಭಿಸಿತ್ತು. ಆದರೆ, ತನಗೆ ಲಭಿಸಿರುವ 9 ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು. 2017ರ ಕಂಚು ಪದಕ ವಿಜೇತ ಭಾರತ ಒಂದು ಹಂತದಲ್ಲಿ ಸತತ ಆರು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಆದರೆ, ಇದನ್ನು ಗೋಲಾಗಿ ಪರಿವರ್ತಿಸದೇ ತನ್ನ ಹಳೆ ಚಾಳಿ ಪುನರಾವರ್ತಿಸಿತು.

53ನೇ ನಿಮಿಷದಲ್ಲಿ ಭಾರತದ ಗೋಲುಕೀಪರ್ ಕೃಷ್ಣನ್ ಪಠಾಣ್‌ರನ್ನು ವಂಚಿಸಿದ ಇಂಗ್ಲೆಂಡ್‌ನ ಮಾರ್ಕ್ ಗ್ಲೆಗೋರ್ನ್ ಇಂಗ್ಲೆಂಡ್ ಪರ ಗೋಲು ಬಾರಿಸಿ ಪಂದ್ಯವನ್ನು 1-1 ರಿಂದ ಸಮಬಲಗೊಳಿಸಿದರು. ಈ ಫಲಿತಾಂಶದೊಂದಿಗೆ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡವು. ಸೋಮವಾರ ವಿಶ್ರಾಂತಿ ಪಡೆಯಲಿರುವ ಭಾರತ ಮಂಗಳವಾರ ವಿಶ್ವದ ನಂ.1 ತಂಡ ಆಸ್ಟ್ರೇಲಿಯವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News