×
Ad

ಸುಲ್ತಾನ್ ಅಝ್ಲಾನ್ ಶಾ ಕಪ್: ಮಲೇಷ್ಯಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Update: 2018-03-07 23:55 IST

ಇಪೋ, ಮಾ.7: ಭಾರತ ಹಾಕಿ ತಂಡ ಬುಧವಾರ ಸುಲ್ತಾನ್ ಅಝ್ಲಾನ್ ಶಾ ಕಪ್‌ನಲ್ಲಿ ಆತಿಥೇಯ ಮಲೇಷ್ಯಾವನ್ನು 5-1 ಅಂತರದಿಂದ ಮಣಿಸಿತು. ಈ ಮೂಲಕ ಟೂರ್ನಿಯಲ್ಲಿ ಕೊನೆಗೂ ಜಯ ಸಾಧಿಸಿದೆ.

ಅರ್ಜೆಂಟೀನ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸಿತ್ತು. ಆದರೆ, ಆಸ್ಟ್ರೇಲಿಯ ವಿರುದ್ಧ ಮೂರನೇ ಪಂದ್ಯದಲ್ಲಿ 2-4 ರಿಂದ ಸೋಲುವುದರೊಂದಿಗೆ ಫೈನಲ್ ಆಸೆ ಕೈಬಿಟ್ಟಿತ್ತು.

   ಇಂದು ಭಾರತದ ಪರ ಗುರ್ಜಂತ್ ಸಿಂಗ್(42ನೇ, 57ನೇ ನಿಮಿಷ) ಅವಳಿ ಗೋಲು ಬಾರಿಸಿದರೆ, ಶೀಲಾನಂದ 10ನೇ ನಿಮಿಷದಲ್ಲಿ ಗೋಲು ಬಾರಿಸಿ ಆರಂಭದಲ್ಲೇ ಮೇಲುಗೈ ಒದಗಿಸಿದರು. ಸುಮಿತ್ ಕುಮಾರ್(48ನೇ ನಿ.), ರಮಣ್‌ದೀಪ್(54ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರು. ಮಲೇಷ್ಯಾದ ಪರ ಫೈಸಲ್ 33ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News