ಐಎನ್‌ಎಕ್ಸ್ ಮಾದ್ಯಮ ಪ್ರಕರಣ: ಮಧ್ಯಂತರ ಜಾಮೀನಿಗೆ ದಿಲ್ಲಿ ಉಚ್ಚ ನ್ಯಾಯಾಲಯ ಸಂಪರ್ಕಿಸಿ: ಸುಪ್ರೀಂ
ಹೊಸದಿಲ್ಲಿ, ಮಾ. 8: ಐಎನ್‌ಎಕ್ಸ್ ಮಾದ್ಯಮ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಧ್ಯಂತರ ಜಾಮೀನಿಗೆ ದಿಲ್ಲಿ ಉಚ್ಚ ನ್ಯಾಯಾಲಯ ಸಂಪರ್ಕಿಸುವಂತೆ ಸಿಬಿಐ ಕಸ್ಟಡಿಯಲ್ಲಿರುವ ಕಾರ್ತಿ ಚಿದಂಬರಂಗೆ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ. ಮಧ್ಯಂತರ ಜಾಮೀನಿಗೆ ಇಂದೇ ದಿಲ್ಲಿ ಉಚ್ಚ ನ್ಯಾಯಾಲಯ ಸಂಪರ್ಕಿಸುವಂತೆ ಸುಪ್ರೀಂ ಕೋರ್ಟ್ ಕಾರ್ತಿ ಚಿದಂಬರಂಗೆ ಗುರುವಾರ ನಿರ್ದೇಶಿಸಿದೆ ಹಾಗೂ ಕಾರ್ತಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಶುಕ್ರವಾರ ಅಥವಾ ಶನಿವಾರ ನಡೆಸಲು ಸೂಕ್ತ ಪೀಠ ರಚಿಸುವಂತೆ ಪ್ರಭಾರಿ ಮುಖ್ಯ ನ್ಯಾಯಮೂರ್ತಿಗೆ ಮನವಿ ಮಾಡಿಕೊಂಡಿದೆ. ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮನವಿ ಹಿಂದೆಗೆಯಲು ಕೂಡ ಸುಪ್ರೀಂ ಕೋರ್ಟ್ ಕಾರ್ತಿಗೆ ಅವಕಾಶ ನೀಡಿದೆ.
ಕಾರ್ತಿ ಚಿದಂಬರಂ ವಿರುದ್ಧ ‘‘ಪ್ರಬಲ ಹಾಗೂ ವಿಶ್ವಾಸಾರ್ಹ ಪುರಾವೆಗಳನ್ನು ಇತ್ತೀಚೆಗೆ ಸಂಗ್ರಹಿಸಿದ್ದೇವೆ’’ ಎಂದು ಸಿಬಿಐ ಹೇಳಿದ ಬಳಿಕ ದಿಲ್ಲಿ ಉಚ್ಚ ನ್ಯಾಯಾಲಯ ಕಾರ್ತಿ ಚಿದಂಬರಂ ಅವರ ಕಸ್ಟಡಿಯನ್ನು ಮೂರು ದಿನಗಳ ಕಾಲ ವಿಸ್ತರಿಸಿತ್ತು.