ಮ್ಯಾನ್ಮಾರ್‌ನಲ್ಲಿ ‘ಜನಾಂಗೀಯ ನಿರ್ಮೂಲನೆ’ ಆರೋಪ
Update: 2018-03-09 23:04 IST
ಜಿನೇವ (ಸ್ವಿಟ್ಸರ್‌ಲ್ಯಾಂಡ್), ಮಾ. 9: ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರ ಜನಾಂಗೀಯ ನಿರ್ಮೂಲನೆ ಅಥವಾ ಹತ್ಯಾಕಾಂಡ ನಡೆಸಲಾಗಿದೆ ಎಂಬ ಆರೋಪಗಳನ್ನು ಸಮರ್ಥಿಸುವ ಪುರಾವೆಗಳನ್ನು ಮ್ಯಾನ್ಮಾರ್ ನೋಡಬಯಸುತ್ತದೆ ಎಂದು ಮ್ಯಾನ್ಮಾರ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ತಾಂಗ್ ಟುನ್ ಗುರುವಾರ ಹೇಳಿದ್ದಾರೆ.
‘‘ರಖೈನ್‌ನಲ್ಲಿ ವಾಸಿಸುತ್ತಿದ್ದ ಮುಸ್ಲಿಮ್ ಸಮುದಾಯದ ಜನರ ಪೈಕಿ ಹೆಚ್ಚಿನವರು ಅಲ್ಲೇ ಇದ್ದಾರೆ’’ ಎಂದು ಸ್ವಿಟ್ಸರ್‌ಲ್ಯಾಂಡ್‌ನ ಜಿನೇವದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಹೇಳಿದರು.
‘‘ಮ್ಯಾನ್ಮಾರ್‌ನಲ್ಲಿ ಜನಾಂಗೀಯ ನಿರ್ಮೂಲನೆ ಹಾಗೂ ಜನಾಂಗೀಯ ಹತ್ಯೆ ನಡೆದಿದೆ ಎಂಬ ಹಲವಾರು ಆರೋಪಗಳನ್ನು ನಾವು ಹಲವು ಬಾರಿ ಕೇಳಿದ್ದೇವೆ. ಇದು ನಮ್ಮ ಸರಕಾರದ ನೀತಿಯಲ್ಲ. ಇದನ್ನು ನಾನು ಮೊದಲೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ. ಆರೋಪಗಳನ್ನು ಮಾಡಲಾಗುತ್ತಿದೆ, ಅದಕ್ಕೆ ಸ್ಪಷ್ಟ ಪುರಾವೆಗಳನ್ನು ನಾವು ಬಯಸುತ್ತೇವೆ’’ ಎಂದರು.