ಸಹಿಯುಳ್ಳ ಗಾಂಧಿ ಭಾವಚಿತ್ರ 27.18 ಲಕ್ಷ ರೂ.ಗೆ ಹರಾಜು
Update: 2018-03-11 22:45 IST
ಬೋಸ್ಟನ್, ಮಾ. 11: ಸಹಿಯುಳ್ಳ ಮಹಾತ್ಮಾ ಗಾಂಧೀಜಿಯ ಭಾವಚಿತ್ರವೊಂದು ಅಮೆರಿಕದಲ್ಲಿ 41,806 ಡಾಲರ್ (ಸುಮಾರು 27.18 ಲಕ್ಷ ರೂಪಾಯಿ)ಗೆ ಹರಾಜಾಗಿದೆ.
ಇದು ನಿರೀಕ್ಷಿಸಿದ ಮೊತ್ತಕ್ಕಿಂತ 4 ಪಟ್ಟು ಹೆಚ್ಚಾಗಿದೆ. ಈ ಚಿತ್ರದಲ್ಲಿ ಗಾಂಧೀಜಿ, ಮದನ ಮೋಹನ ಮಾಳವೀಯರೊಂದಿಗೆ ನಡೆಯುತ್ತಿರುವುದನ್ನು ಕಾಣಬಹುದಾಗಿದೆ.
ಈ ಅಪರೂಪದ ಚಿತ್ರವನ್ನು, 1931ರ ಸೆಪ್ಟಂಬರ್‌ನಲ್ಲಿ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯ ಎರಡನೆ ಅವಧಿಯ ಬಳಿಕ ತೆಗೆಯಲಾಗಿತ್ತು. ಚಿತ್ರದ ಮೇಲೆ ‘ಎಂ.ಕೆ. ಗಾಂಧಿ’ ಎಂಬುದಾಗಿ ಶಾಯಿ ಪೆನ್ನಿನಲ್ಲಿ ಸಹಿ ಮಾಡಲಾಗಿದೆ.