×
Ad

ಉಗ್ರವಾದಿ ಸಿಖ್ ಸಂಘಟನೆಯ ಫೇಸ್‌ಬುಕ್ ಪುಟ ರದ್ದು

Update: 2018-03-12 22:39 IST

ಟೊರಾಂಟೊ, ಮಾ. 12: ಫೇಸ್‌ಬುಕ್‌ನಲ್ಲಿದ್ದ ತನ್ನ ಪುಟವನ್ನು ಕಿತ್ತುಹಾಕಿರುವುದನ್ನು ಉಗ್ರವಾದಿ ಸಿಖ್ ಗುಂಪು ‘ಸಿಖ್ಸ್ ಫಾರ್ ಜಸ್ಟಿಸ್’ (ಎಸ್‌ಎಫ್‌ಜೆ) ಪ್ರತಿಭಟಿಸಿದೆ. ಭಾರತದ ಸರಕಾರದ ಸೂಚನೆಯಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅದು ಆರೋಪಿಸಿದೆ.

‘ನ್ಯೂಸ್ ಪಂಜಾಬ್ 2020’ ಎಂಬ ಹೆಸರಿನ ಪುಟವನ್ನು ಶನಿವಾರ ಫೇಸ್‌ಬುಕ್‌ನಿಂದ ತೆಗೆದುಹಾಕಲಾಯಿತು, ಆದರೆ ಇಮೇಲ್ ಮತ್ತು ಸಂದೇಶ ಅಭಿಯಾನಗಳ ಹಿನ್ನೆಲೆಯಲ್ಲಿ ರವಿವಾರ ಪುಟವನ್ನು ಮರಳಿಸಲಾಯಿತು ಎಂದು ಎಸ್‌ಎಫ್‌ಜೆಯ ಕಾನೂನು ಸಲಹೆಗಾರ ಗುರ್‌ಪತ್‌ವಂತ್ ಪನ್ನುನ್ ಹೇಳಿದರು.

ರವಿವಾರ ಸಂಜೆ ಪುಟ ಕಾಣಿಸಿದರೂ, ರಾತ್ರಿಯ ಹೊತ್ತಿಗೆ ಅದನ್ನು ಮತ್ತೆ ನಿಷೇಧಿಸಲಾಯಿತು.

ಈ ಪುಟಕ್ಕೆ 1 ಲಕ್ಷ ಅನುಯಾಯಿಗಳಿದ್ದರು.

ಮಾಧ್ಯಮ ವೇದಿಕೆಯನ್ನು ತೆಗೆದುಹಾಕಿರುವುದರ ಹಿಂದೆ ಭಾರತ ಸರಕಾರವಿದೆ ಎಂದು ಪನ್ನುನ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News