×
Ad

ಸಂಜೀವನಿ ಜಾಧವ್‌ಗೆ ಒಲಿದ ಕಂಚು

Update: 2018-03-15 23:35 IST

ಗುಯಾಂಗ್(ಚೀನಾ), ಮಾ.15: ಭಾರತದ ಭರವಸೆಯ ದೂರ ಅಂತರದ ಓಟಗಾರ್ತಿ ಸಂಜೀವನಿ ಜಾಧವ್ 14ನೇ ಆವೃತ್ತಿಯ ಏಷ್ಯನ್ ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 8 ಕಿ.ಮೀ. ಕಂಟ್ರಿ ರೇಸ್‌ನಲ್ಲಿ ಕಂಚು ಜಯಿಸಿದ್ದಾರೆ.

ಗುರುವಾರ ನಡೆದ ಸ್ಪರ್ಧೆಯಲ್ಲಿ 20ರ ಹರೆಯದ ಸಂಜೀವನಿ 8 ಕಿ.ಮೀ. ದೂರವನ್ನು 28 ನಿಮಿಷ, 19 ಸೆಕೆಂಡ್‌ನಲ್ಲಿ ತಲುಪಿದರು. ಚೀನಾದ ಲೀ ಡಾನ್(28.03) ಹಾಗೂ ಜಪಾನ್‌ನ ಅಬೆ ಯುಕಾರಿ(28.06) ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದರು.

ಸಂಜೀವನಿ, ಸ್ವಾತಿ ಗಧಾವೆ, ಜುಮಾ ಖತುನ್ ಹಾಗೂ ಲಲಿತಾ ಬಾಬರ್ ಅವರನ್ನೊಳಗೊಂಡ ಭಾರತದ ಮಹಿಳಾ ತಂಡ ಕಂಚು ಜಯಿಸಿದೆ. ವೈಯಕ್ತಿಕ ಓಟದ ಸ್ಪರ್ಧೆಯಲ್ಲಿ ದೇಶದ ಪರ ಉತ್ತಮ ಪ್ರದರ್ಶನ ನೀಡುವ ಮೂವರನ್ನು ಟೀಮ್ ಮೆಡಲ್‌ಗೆ ಪರಿಗಣಿಸಲಾಗುತ್ತದೆ.

ಸ್ವಾತಿ(30.18)ವೈಯಕ್ತಿಕ ರೇಸ್‌ನಲ್ಲಿ 11ನೇ ಸ್ಥಾನ ಪಡೆದರೆ, ಖತುನ್(32.14) 14ನೇ ಸ್ಥಾನ ಪಡೆದಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನ 3000 ಮೀ. ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಅಂತಿಮ ಸುತ್ತು ತಲುಪಿದ ಬಾಬರ್ 32.53 ಸೆಕೆಂಡ್‌ನಲ್ಲಿ ಗುರಿ ತಲುಪಿ 15ನೇ ಸ್ಥಾನ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News