×
Ad

ತ್ರಿಕೋನ ಸರಣಿ: ಬಾಂಗ್ಲಾ ತಂಡಕ್ಕೆ ಶಾಕಿಬ್ ಸೇರ್ಪಡೆ

Update: 2018-03-15 23:40 IST

ಢಾಕಾ, ಮಾ.15: ಬಾಂಗ್ಲಾದೇಶ ತಂಡ ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಟ್ವೆಂಟಿ-20 ಟೂರ್ನಮೆಂಟ್‌ಗೆ ಶಾಕಿಬ್ ಅಲ್ ಹಸನ್‌ರನ್ನು ಸೇರಿಸಿಕೊಂಡಿದೆ. ‘‘ಆಲ್‌ರೌಂಡರ್ ಶಾಕಿಬ್ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿದ್ದಾರೆ. ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಆಡಲು ಸಮರ್ಥರಿದ್ದಾರೆಯೇ ಎಂದು ನೋಡಲಿದ್ದೇವೆ’’ ಎಂದು ಆಯ್ಕೆಗಾರ ಹಬೀಬುಲ್ ಬಶರ್ ಹೇಳಿದ್ದಾರೆ.

ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಕೈಬೆರಳಿಗೆ ಗಾಯವಾದ ಕಾರಣ ತ್ರಿಕೋನ ಸರಣಿಯಿಂದ ದೂರ ಉಳಿದಿದ್ದರು. ಭಾರತ ಹಾಗೂ ಬಾಂಗ್ಲಾ ತಂಡವಿರುವ ತ್ರಿಕೋನ ಸರಣಿಯಲ್ಲಿ ಬ್ಯಾಟ್ಸ್‌ಮನ್ ಮಹ್ಮುದುಲ್ಲಾ ರಿಯಾದ್ ಹಂಗಾಮಿ ನಾಯಕನಾಗಿ ಬಾಂಗ್ಲಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಾಂಗ್ಲಾದೇಶ ತಂಡ ಶುಕ್ರವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಮಾಡು-ಮಡಿ ಪಂದ್ಯ ಆಡಲಿದೆ. ಬಾಂಗ್ಲಾದೇಶ ಟೂರ್ನಿಯಲ್ಲಿ ಎರಡು ಬಾರಿ ಭಾರತ ವಿರುದ್ಧ ಸೋತಿದೆ. ಶ್ರೀಲಂಕಾ ವಿರುದ್ಧ ಕಳೆದ ಪಂದ್ಯದಲ್ಲಿ ಗರಿಷ್ಠ ರನ್ ಗುರಿಯನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News