ಭಾರತಕ್ಕೆ ಬರುವ ವಿದೇಶಿಯರು ಬಿಕಿನಿ ತೊಟ್ಟು ನಡೆದಾಡಬಾರದು: ಸಚಿವ ಕಣ್ಣಂದಾನಂ

Update: 2018-03-16 12:54 GMT

ಹೊಸದಿಲ್ಲಿ,ಮಾ. 16: ಭಾರತಕ್ಕೆ ವಿದೇಶದಿಂದ ಬರುವ ಪ್ರವಾಸಿಗರು ಭಾರತದ ಸಂಸ್ಕøತಿಗೊಪ್ಪುವ ರೀತಿಯಲ್ಲಿ ವಸ್ತ್ರ ಧರಿಸಬೇಕು ಎಂದು ಕೇಂದ್ರ ಪ್ರವಾಸೋದ್ಯಮ  ಸಚಿವ ಅಲ್ಫೋನ್ಸ್ ಕಣ್ಣಂದಾನಂ ಹೇಳಿದ್ದಾರೆ. ವಿದೇಶಿಯರು ಅವರ ದೇಶದಲ್ಲಿ ಬಿಕಿನಿ ಧರಿಸಿ ನಡೆದಾಡುವುದು ಸಾಮಾನ್ಯ. ಆದರೆ ಇದನ್ನು ಭಾರತದಲ್ಲಿ ಅನುಮತಿಸಲು ಸಾಧ್ಯವಿಲ್ಲ. ಗೋವಾದ ಬೀಚ್‍ಗಳಲ್ಲಿ ವಿದೇಶಿಯರು ಹೀಗೆ ನಡೆದಾಡುತ್ತಾರೆ. ಅವರು ಹೊರ ದೇಶಗಳಿಗೆ ಪ್ರವಾಸ ಹೋಗುವಾಗ ಅಲ್ಲಿನ ಸಂಸ್ಕøತಿಯಂತೆ  ಬಟ್ಟೆ ಧರಿಸಬೇಕು ಎಂದು ನೋಡಬೇಕೆಂದು  ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಕಣ್ಣಂದಾನಂ ಹೇಳಿದರು.

 ಲ್ಯಾಟಿನ್ ಅಮೆರಿಕದೇಶಗಳಲ್ಲಿ ಬಿಕಿನಿಯಂತಹ ವಸ್ತ್ರಗಳು ಧರಿಸಿ ಅಡ್ಡಾಡುವುದಕ್ಕೆ ಅನುಮತಿ ಇದೆ. ಆದರೆ ಬೇರೆ ದೇಶಗಳಿಗೆ ಹೋಗುವಾಗ  ಅಲ್ಲಿನ ಸಂಸ್ಕøತಿಯ ಪ್ರಕಾರವೇ ಬಟ್ಟೆ ಬರೆ ಧರಿಸಬೇಕಾಗುತ್ತದೆ. ಅಂದರೆ ಎಲ್ಲರೂ ಸೀರೆ ಉಡಬೇಕೆಂದು ನಾನು ಹೇಳುತ್ತಿಲ್ಲ ಎಂದು ಕಣ್ಣಂದಾನಂ ಹೇಳಿದರು. ಈ ಹಿಂದೆ ಕಳೆದವರ್ಷ ಕಣ್ಣಂದಾನಂ  ಭಾರತಕ್ಕೆ ಬರುವ ವಿದೇಶಿಯರು ಅವರ ಊರಲ್ಲೇ ಬೀಫ್ ತಿಂದು ಬರಲಿ ಎಂದು ಹೇಳೀದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News