ಇರಾಕ್‌ನಲ್ಲಿ ಹೆಲಿಕಾಪ್ಟರ್ ಪತನ: 7 ಅಮೆರಿಕ ಸೈನಿಕರು ಸಾವು
Update: 2018-03-16 23:14 IST
ವಾಶಿಂಗ್ಟನ್, ಮಾ. 16: ಅಮೆರಿಕದ ಸೇನಾ ಹೆಲಿಕಾಪ್ಟರೊಂದು ಪಶ್ಚಿಮ ಇರಾಕ್‌ನಲ್ಲಿ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 7 ಅಮೆರಿಕನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
‘ಸಿಕೋರ್‌ಸ್ಕಿ ಎಚ್‌ಎಚ್-60 ಪೇವ್ ಹಾಕ್’ ಹೆಲಿಕಾಪ್ಟರ್ ಪತನದಲ್ಲಿ ಶತ್ರುವಿನ ಕೈವಾಡ ಇದ್ದಂತೆ ಕಾಣುವುದಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ನೀಡಿದ ಹೇಳಿಕೆಯೊಂದು ತಿಳಿಸಿದೆ.
ಅದರ ಜೊತೆಗಿದ್ದ ಇನ್ನೊಂದು ಅಮೆರಿಕನ್ ಹೆಲಿಕಾಪ್ಟರ್ ಅಪಘಾತದ ಸುದ್ದಿಯನ್ನು ವರದಿ ಮಾಡಿದೆ. ತಕ್ಷಣ ಇರಾಕ್ ಭದ್ರತಾ ಪಡೆಗಳು ಮತ್ತು ಮೈತ್ರಿಕೂಟದ ಸದಸ್ಯರನ್ನೊಳಗೊಂಡ ಕ್ಷಿಪ್ರ ಕಾರ್ಯಾಚರಣಾ ತಂಡವು ಸ್ಥಳಕ್ಕೆ ಧಾವಿಸಿದೆ.