ಬಿಜೆಪಿ ಶಾಸಕನಿಂದ ಟೋಲ್ ಸಿಬ್ಬಂದಿಗೆ ಹಲ್ಲೆ

Update: 2018-03-18 05:10 GMT

ಜೈಪುರ, ಮಾ.18: ರಾಜಸ್ಥಾನದ ಬಿಜೆಪಿ ಶಾಸಕ ಬನ್ಸ್‌ವಾರಾ ಜಿಲ್ಲೆಯ ಟೋಲ್ ಪ್ಲಾಜಾದಲ್ಲಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆಡಳಿತ ಪಕ್ಷದ ಶಾಸಕ ಜೀತ್‌ಮಲ್ ಕಾಂತ್, ಭದಾಲಿಯಾ ಎಂಬಲ್ಲಿ ಟೋಲ್ ಸಿಬ್ಬಂದಿಯನ್ನು ಎಳೆದಾಡಿ ಹಲ್ಲೆ ಮಾಡುತ್ತಿರುವ ದೃಶ್ಯ ವೀಡಿಯೊ ತುಣುಕಿನಲ್ಲಿ ದಾಖಲಾಗಿದೆ. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸರಿಗೆ ದೂರು ನೀಡಲು ಟೋಲ್ ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಶಾಸಕ ಹಾಗೂ ಸಿಬ್ಬಂದಿ ನಡುವೆ ಪರಸ್ಪರ ತಪ್ಪುಕಲ್ಪನೆಯಿಂದ ಈ ರೀತಿ ಆಗಿದೆ. ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಾರೂ ದೂರು ನೀಡಿಲ್ಲ ಎಂದು ಬನ್ಸ್‌ವಾರಾ ಎಸ್ಪಿ ಕಲುರಾಂ ರಾವತ್ ಸ್ಪಷ್ಟಪಡಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಲು ಗಾರ್ಹಿ ಶಾಸಕ ಜೀತ್‌ಮಲ್ ಕಾಂತ್ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News