ಪಾಕ್ ಗುಂಡಿನ ದಾಳಿಗೆ ಒಂದೇ ಕುಟುಂಬದ ಐವರ ಸಾವು

Update: 2018-03-18 04:36 GMT

ಶ್ರೀನಗರ, ಮಾ.18: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಾಸೋನಿ ಗ್ರಾಮದಲ್ಲಿ ರವಿವಾರ ಪಾಕಿಸ್ತಾನದ ಸೇನೆಯು ನಡೆಸಿದ  ಅಪ್ರಚೋದಿತ ಗುಂಡಿನ ದಾಳಿಗೆ ಒಂದೇ ಕುಟಂಬದ ಐವರು ಬಲಿಯಾಗಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್ ಪಿ ವಹೀದ್ ತಿಳಿಸಿದ್ದಾರೆ.

ಭಾರತೀಯ ನಾಗರಿಕರನ್ನು ಗುರಿಯಾಗಿರಿಸಿ ಪಾಕಿಸ್ತಾನ ಸೇನೆಯು ದಾಳಿ ನಡೆಸುತ್ತಿದ್ದು, ಭಾರತೀಯ ಸೇನೆಯು ಪಾಕ್ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News