ಐಎಎಫ್ ವಿಮಾನ ಪತನ

Update: 2018-03-20 16:11 GMT

ಹೊಸದಿಲ್ಲಿ, ಮಾ. 20: ಭಾರತೀಯ ವಾಯು ಪಡೆಯ ಜೆಟ್ ವಿಮಾನ ಜಾರ್ಖಂಡ್ ಗಡಿ ಸಮೀಪ ಒಡಿಸ್ಸಾದ ಮಯೂರ್‌ಬಂಜ್ ಜಿಲ್ಲೆಯಲ್ಲಿ ಮಂಗಳವಾರ ಪತನಗೊಂಡಿದೆ. ಟ್ರೈನಿ ಪೈಲೆಟ್ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲು ಪ್ರಯತ್ನಿಸಿದರು ಆಗ ವಿಮಾನ ಪತನಹೊಂದಿತು. ಈ ಘಟನೆಯಲ್ಲಿ ಅವರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ದಿನನಿತ್ಯತ ತರಬೇತಿ ಹಿನ್ನೆಲೆಯಲ್ಲಿ ವಿಮಾನ ಖರಗ್‌ಪುರದ ಕಲೈಕುಂಡ ವೈಮಾನಿಕ ಪಡೆಯ ನಿಲ್ದಾಣದಿಂದ ಹಾರಾಟ ಆರಂಬಿಸಿತ್ತು. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News