ಭಾರತಕ್ಕೆ ಒಲಿಂಪಿಕ್ಸ್ ಗೆ 16 ಸ್ಥಾನಗಳ ಅವಕಾಶ

Update: 2018-03-20 18:29 GMT

ಹೊಸದಿಲ್ಲಿ, ಮಾ.20: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಶೂಟಿಂಗ್‌ನ 15 ಇವೆಂಟ್‌ಗಳ 16 ಸ್ಥಾನ ತುಂಬಲು ಅವಕಾಶ ಕಲ್ಪಿಸಲಾಗಿದೆ.

 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರವೇಶ ಪ್ರಕ್ರಿಯೆ ಕೊರಿಯಾದಲ್ಲಿ ಆಗಸ್ಟ್-ಸೆಪ್ಟಂಬರ್‌ನಲ್ಲಿ ನಡೆಯಲಿರುವ ಐಎಸ್‌ಎಸ್‌ಎಫ್ ವರ್ಲ್ಡ್ ಚಾಂಪಿಯನ್‌ಶಿಪ್ ಮೂಲಕ ಆರಂಭಗೊಳ್ಳಲಿದೆ.

  15 ಒಲಿಂಪಿಕ್ಸ್ ಶೂಟಿಂಗ್ ಇವೆಂಟ್‌ಗಳಲ್ಲಿ ಒಟ್ಟು 360 ಕೋಟಾ ನಿಗದಿಪಡಿಸಲಾಗಿದೆ. ಮುಂದಿನ ವರ್ಷ ರಾಜಧಾನಿ ದಿಲ್ಲಿಯಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ 10 ಮೀ. ಏರ್ ರೈಫಲ್, 10 ಮೀ. ಏರ್ ಪಿಸ್ತೂಲ್, ರೈಫಲ್ 3 ಪೊಶಿಶನ್ ಮತ್ತು ರ್ಯಾಪಿಡ್ ಪಿಸ್ತೂಲ್ ಇವೆಂಟ್‌ಗಳಲ್ಲಿ ಪುರುಷ ಮತ್ತು ಮಹಿಳಾ ವಿಭಾಗದ ಪ್ರತಿಯೊಂದು ಸ್ಪರ್ಧೆಗಳಲ್ಲೂ ತಲಾ ಇಬ್ಬರಿಗೆ ಅವಕಾಶ ದೊರೆಯಲಿದೆ.

ಇತ್ತೀಚೆಗೆ ಮೆಕ್ಸಿಕೊದಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ ಶೂಟರ್‌ಗಳು 4 ಚಿನ್ನ, ಸೇರಿದಂತೆ 9 ಪದಕಗಳನ್ನು ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News