ಆಧಾರ್ ಸೋರಿಕೆ ಮತ್ತೊಮ್ಮೆ ಬೆಳಕಿಗೆ

Update: 2018-03-20 18:42 GMT

 ನಿಮ್ಮ ಆಧಾರ್ ದತ್ತಾಂಶದ ಖಾಸಗಿತನದ ಬಗ್ಗೆ ಆತಂಕವನ್ನು ಹೆಚ್ಚಿಸುವ ಇನ್ನೊಂದು ಪ್ರಕರಣದಲ್ಲಿ, ಬರೀ ಗೂಗಲ್ ಸರ್ಚ್ ಮೂಲಕ ನಿಮಗೆ ಹಲವಾರು ಮಂದಿ ಆಧಾರ್ ವಿವರಗಳನ್ನು ಪಡೆಯಲು ಸಾಧ್ಯವೆಂಬುದು ಬೆಳಕಿಗೆ ಬಂದಿದೆ. ನಿಮ್ಮ ಹೆಸರು, ವಿಳಾಸ, ಆಧಾರ್‌ಸಂಖ್ಯೆ, ಜನ್ಮದಿನಾಂಕ ಹಾಗೂ ಭಾವಚಿತ್ರಗಳನ್ನು ಇಂಟರ್‌ನೆಟ್ ಮೂಲಕ ಯಾವುದೇ ಕಾರಣವಿಲ್ಲದೆಯೂ ಯಾರೂ ಕೂಡಾ ಪಡೆಯಬಹುದಾಗಿದೆ.ಆದರೆ ಆಧಾರ್‌ನ ಬಯೋಮೆಟ್ರಿಕ್ ವಿವರಗಳು ಲಭ್ಯವಿಲ್ಲದಿರುವುದು ದೊಡ್ಡ ಪುಣ್ಯವೆನ್ನಬಹುದು.
ವ್ಯಕ್ತಿಗಳ ಆಧಾರ್ ವಿವರಗಳನ್ನು ಅಪ್‌ಲೋಡ್ ಮಾಡಿರುವ ವೆಬ್‌ಸೈಟ್‌ಗಳ ಹೆಸರುಗಳನ್ನು ಇಲ್ಲಿ ನೀಡಲಾಗಿದೆ.

  ಭಾರತ ರಾಷ್ಟ್ರೀಯ ಸಾಗರ ಸೇವೆಗಳ ಕೇಂದ್ರ (www.incois.gov.in)
ಅಖಿಲ ಭಾರತ ಫುಟ್ಬಾಲ್ ಫೆಡರೇಶನ್‌ನ ಅಧಿಕೃತ ವೆಬ್‌ಸೈಟ್ (www.the-aiff.com)
ಖಾಸಗಿ ಕಂಪೆನಿ ಸ್ಟಾರ್‌ಕಾರ್ಡ್ಸ್ ಇಂಡಿಯಾದ ವೆಬ್‌ಸೈಟ್ (http://starcardsindia.com),

ಹೈದರಾಬಾದ್‌ನಲ್ಲಿ ನೆಲೆಸಿರುವ ಪೇಮೆಂಟ್ ಗೇಟ್‌ವೇ ಸರ್ವಿಸ್‌ನ ಸೇವಾದಾರರು, ಮೊಬೈಲ್ ಆ್ಯಪ್ ಅಭಿವೃದ್ಧಿ ಹಾಗೂ ಮೊಬೈಲ್ ಆ್ಯಪ್ ವಿನ್ಯಾಸಕ ಸಂಸ್ಥೆ.

ಆಧಾರ್ ವಿವರಗಳನ್ನು ಪಡೆದುಕೊಳ್ಳುವ ವಿಧಾನ

ಹಲವಾರು ಮಂದಿಯ ಆಧಾರ್‌ವಿವರಗಳನ್ನು ಹುಡುಕುವುದು ಎಷ್ಟು ಸುಲಭ 'ವಿಧಾನ' ಇಲ್ಲಿದೆ.

 ಹೆಜ್ಜೆ 1: ''meri Adhaar meri pehchan filetype:pdf'' ಎಂಬುದಾಗಿ ಗೂಗಲ್‌ನಲ್ಲಿ ಸರ್ಚ್ ಮಾಡಿ.

 ಹೆಜ್ಡೆ 2: ಆಗ ಸರ್ಚ್‌ನಲ್ಲಿ ತೋರಿಸಲಾಗುವ ವಿವಿಧ ಪಿಡಿಎಫ್ ಫೈಲ್‌ಗಳಿಗೆ ಕ್ಲಿಕ್ ಮಾಡಿ.

 ಹೆಜ್ಜೆ 3: ಪಿಡಿಎಫ್ ಡೌನ್‌ಲೋಡ್ ಮಾಡಲು ಕ್ಲಿಕ್ಕಿಸಿ.

ಹೆಜ್ಜೆ 4: ಅರೆ..!. ನಿಮಗೆ ಪರಿಚಯವಿಲ್ಲದ ಅದೆಷ್ಟೋ ಮಂದಿಯ ಆಧಾರ್ ವಿವರಗಳು ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಆಗಿಬಿಡುತ್ತದೆ.

 ನೀವು ಪಡೆಯಲು ಸಾಧ್ಯವಾಗುವ ಆಧಾರ್ ವಿವರಗಳು ಹೀಗಿವೆ: ಆಧಾರ್ ಸಂಖ್ಯೆ, ಹೆಸರು, ಪೋಷಕರ ಹೆಸರು, ವಿಳಾಸ, ಜನ್ಮದಿನಾಂಕ, ಛಾಯಾಚಿತ್ರ.

ಈ ರೀತಿಯ ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಆತಂಕ ಮೂಡಿಸುವ ಪ್ರಶ್ನೆಗಳು ಇಲ್ಲಿವೆ.

► ಸಂಬಂಧ ಪಟ್ಟ ವೆಬ್‌ಸೈಟ್‌ಗಳು ಉದ್ದೇಶ ಪೂರ್ವಕವಾಗಿಯೇ ಈ ವ್ಯಕ್ತಿಗಳ ಆಧಾರ್‌ವಿವರಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿವೆಯೇ?.

► ನಿಮ್ಮ ಆಧಾರ್ ವಿವರಗಳು ಬಹಿರಂಗಗೊಂಡಿರುವುದರಿಂದ ನಿಮಗೆ ಸಮಸ್ಯೆಯಿಲ್ಲವೇ ಎಂದು ಅವರನ್ನು ಕೇಳಲಾಗಿದೆಯೇ?. ಹೀಗಾಗಿರುವುದು ಆ ವ್ಯಕ್ತಿಗಳಿಗೆ ಅರಿವಿದೆಯೇ?.
► ಒಂದು ವೇಳೆ ಈ ವ್ಯಕ್ತಿಗಳ ಅನುಮತಿಯನ್ನು ಪಡೆಯದೆ ಆಧಾರ್ ಮಾಹಿತಿಯನ್ನು ಬಹಿರಂಗಪಡಿಸಿದ್ದೇ ಆದಲ್ಲಿ, ಅದು ವ್ಯಕ್ತಿಯ ಖಾಸಗಿತನದ ಹಕ್ಕಿನ ಉಲ್ಲಂಘನೆಯಲ್ಲವೇ?.
► ಈ ವ್ಯಕ್ತಿಗಳ ಆಧಾರ್ ವಿವರಗಳು ಸಾರ್ವಜನಿಕವಾಗಿ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿರುವುದು ಸಂಬಂಧಪಟ್ಟ ವೆಬ್‌ಸೈಟ್‌ಗಳಿಗೆ ಅರಿವಿದೆಯೇ?.
► ಈ ವ್ಯಕ್ತಿಗಳ ಆಧಾರ್ ವಿವರಗಳನ್ನು ಯಾವ ಕಾರಣಕ್ಕಾಗಿ ಅಪ್‌ಲೋಡ್ ಮಾಡಲಾಗಿದೆ?.
► ಆನ್‌ಲೈನ್‌ನಲ್ಲಿ ಪಿಡಿಎಫ್ ಫೈಲ್‌ಗಳಲ್ಲಿ ಅವುಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅವರು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ?.
► ಒಂದು ವೇಳೆ ಸರಕಾರಿ ವೆಬ್‌ಸೈಟ್ (www.incois.gov.in) ಇದನ್ನು ಉದ್ದೇಶರಹಿತವಾಗಿ ಮಾಡಿದ್ದೇ ಆದಲ್ಲಿ, ಜನಸಾಮಾನ್ಯರ ದತ್ತಾಂಶ ಹಾಗೂ ಆಧಾರ್ ವಿವರಗಳನ್ನು ಹೇಗೆ ರಕ್ಷಿಸಬೇಕೆಂಬ ಬಗ್ಗೆ ಸರಕಾರದಲ್ಲಿ ಅರಿವಿನ ಕೊರತೆಯಿದೆಯೇ?.
► ಈ ವೆಬ್‌ಸೈಟ್‌ಗಳು ಆಧಾರ್ ವಿವರಗಳನ್ನು ಸೋರಿಕೆ ಮಾಡಿರುವುದು ಉದ್ದೇಶಪೂರ್ವಕವಾಗಿರಬಹುದು ಅಥವಾ ಅಲ್ಲದೆಯೂ ಇರಬಹುದು. ಆದರೆ ಈ ಸೋರಿಕೆಗೆ ಯಾರನ್ನು ದೂಷಿಸಬೇಕಾಗಿದೆ.
 ಈ ಎಲ್ಲಾ ಪ್ರಶ್ನೆಗಳಿಗೆ ವಿಶಿಷ್ಟ ಗುರುತುಚೀಟಿ ಪ್ರಾಧಿಕಾರ (ಯುಐಡಿಎಐ)ವು ಉತ್ತರಿಸಬೇಕಾಗಿದೆ. ಒಂದಲ್ಲ ಒಂದು ಹಂತದಲ್ಲಿ ವ್ಯಕ್ತಿಗಳ ಆಧಾರ್ ವಿವರಗಳನ್ನು ಭದ್ರವಾಗಿಡುವಲ್ಲಿ ವೈಫಲ್ಯವುಂಟಾಗಿರುವುದು ಮತ್ತೊಮ್ಮೆ ಸಾಬೀತಾಗಿದೆ.
ಬಯಲಾಗಿರುವ ಈ ವಾಸ್ತವಾಂಶಗಳನ್ನು ತಳ್ಳಿಹಾಕಲು ಯುಐಡಿಎಐಗೆ ಸಾಧ್ಯವಿಲ್ಲ. ಯಾಕೆಂದರೆ ಯಾರೂ ಕೂಡಾ ಗೂಗಲ್‌ನಲ್ಲಿ ಸರ್ಚ್ ಮಾಡಿ, ಈ ವರದಿಯನ್ನು ದೃಢಪಡಿಸಿಕೊಳ್ಳಬಹುದಾಗಿದೆ.

 

Writer - -ಆರ್.ಎನ್.

contributor

Editor - -ಆರ್.ಎನ್.

contributor

Similar News

ಜಗದಗಲ
ಜಗ ದಗಲ