ಮಾಲ್ದೀವ್ಸ್: ಗಯೂಮ್, ನ್ಯಾಯಾಧೀಶರ ವಿರುದ್ಧ ಭಯೋತ್ಪಾದನೆ ಮೊಕದ್ದಮೆ

Update: 2018-03-21 17:38 GMT
ಮೌಮೂನ್ ಅಬ್ದುಲ್ ಗಯೂಮ್

ಮಾಲೆ (ಮಾಲ್ದೀವ್ಸ್), ಮಾ. 21: ಮಾಲ್ದೀವ್ಸ್‌ನ ಮಾಜಿ ಸರ್ವಾಧಿಕಾರಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಕೆಲವು ಉನ್ನತ ಪೊಲೀಸ್ ಅಧಿಕಾರಿಗಳ ವಿರುದ್ಧ ಅಧಿಕಾರಿಗಳು ಭಯೋತ್ಪಾದನೆ ಮೊಕದ್ದಮೆ ದಾಖಲಿಸಿದ್ದಾರೆ.

9 ಮಂದಿಯ ವಿರುದ್ಧ ಕ್ರಿಮಿನಲ್ ನ್ಯಾಯಾಲಯದಲ್ಲಿ ಭಯೋತ್ಪಾದನೆ ಮೊಕದ್ದಮೆ ದಾಖಲಿಸಲಾಗಿದೆ. ಹಿಂದೂ ಮಹಾಸಾಗರ ದ್ವೀಪವನ್ನು 30 ವರ್ಷಗಳ ಕಾಲ ಆಳಿದ ಮೌಮೂನ್ ಅಬ್ದುಲ್ ಗಯೂಮ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಅಬ್ದುಲ್ಲಾ ಸಯೀದ್ ಮತ್ತು ಸುಪ್ರೀಂ ಕೋರ್ಟ್‌ನ ಇನ್ನೋರ್ವ ನ್ಯಾಯಾಧೀಶ ಅಲಿ ಹಮೀದ್, ಗಯೂಮ್ ಪುತ್ರ ಸೇರಿದಂತೆ ನಾಲ್ವರು ಸಂಸದರು ಹಾಗೂ ಓರ್ವ ಮಾಜಿ ಪೊಲೀಸ್ ಕಮಿಶನರ್ ಆರೋಪಿಗಳ ಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News