ವಾರದ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿನಿ, ರವಿವಾರ ‘ಮಾಂಸ ವ್ಯಾಪಾರಿ’!

Update: 2018-03-21 18:07 GMT

ತಿರುಪುರ್, ಮಾ.21: ತಮ್ಮ ಕುಟುಂಬಗಳಿಗೆ ನೆರವಾಗಲು ಅನೇಕ ಮಹಿಳೆಯರು ಕಷ್ಟಕರ ಕೆಲಸಗಳನ್ನು ಮಾಡುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿಯ ಕಥೆ ಎಲ್ಲರಿಗೂ ಸ್ಫೂರ್ತಿ ಎಂದರೆ ತಪ್ಪಾಗಲಾರದು. ಇವರ ಹೆಸರು ಸಿ.ಶಣ್ಮುಗಪ್ರಿಯ (20), ತಿರುಪುರ್ ನ ಸರಕಾರಿ ಆರ್ಟ್ಸ್ ಕಾಲೇಜಿನ 3ನೆ ವರ್ಷದ ವಿದ್ಯಾರ್ಥಿನಿ. ಇವರು ತಮ್ಮ ತಂದೆಯ ಜೊತೆ ಪ್ರತಿ ರವಿವಾರ ಮಾಂಸ ಮಾರುತ್ತಾರೆ.

“ಹಲವು ವರ್ಷಗಳಿಂದ ನನ್ನ ತಂದೆ ಮಾಂಸ ಮಾರಾಟ ಮಾಡುತ್ತಿದ್ದರು. ನನ್ನ ತಮ್ಮ ಕೂಡ ಇದೇ ಕೆಲಸ ಮಾಡುತ್ತಿದ್ದಾನೆ. ತಂದೆಗೆ ಸಹಾಯ ಮಾಡಲು ಮೊದ ಮೊದಲು ಕೆಲಸ ಮಾಡುತ್ತಿದ್ದೆ. ಇದೀಗ 2 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ” ಎಂದವರು ಹೇಳುತ್ತಾರೆ.

“ಮೊದಮೊದಲು ನನಗೆ ಕಷ್ಟವಾಗುತ್ತಿತ್ತು. ಈ ಕೆಲಸ ಶುರು ಮಾಡಿದ ನಂತರ ನಾನು ಮಾಂಸಾಹಾರ ಸೇವಿಸುವುದನ್ನೇ ಬಿಟ್ಟಿದ್ದೆ. ಇದೀಗ ನನಗೆ ಕೆಲಸ ಮಾಡಲು ಸುಲಭವಾಗುತ್ತಿದೆ. ನನ್ನ ತಂದೆಗೆ  ನಾನು ಸಹಾಯ ಮಾಡಲೇಬೇಕು. ಈ ಕೆಲಸ ನನ್ನ ಶಿಕ್ಷಣಕ್ಕೆ ಸಹಾಯ ಮಾಡುತ್ತದೆ” ಎಂದವರು ಹೇಳುತ್ತಾರೆ.

“ನಮ್ಮ ಸಮುದಾಯದಲ್ಲಿ ಕೆಲವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಮನೆಯಿಂದ ಕಳಿಸಲು ಇಷ್ಟ ಪಡುತ್ತಾರೆ. ಆದರೆ ನನ್ನ ತಂದೆ ನನ್ನನ್ನು ಕಾಲೇಜಿಗೆ ಕಳುಹಿಸುತ್ತಿದ್ದಾರೆ. ಯಾವುದೇ ಕೆಲಸವು ಕೀಳು ಅಥವಾ ಘನತೆಯಿಲ್ಲದ್ದಲ್ಲ. ಎಲ್ಲರೂ ನನಗೆ ಬೆಂಬಲ ನೀಡುತ್ತಿದ್ದಾರೆ” ಎಂದು ಶಣ್ಮುಗಪ್ರಿಯ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News