ಐಪಿಎಲ್‌ನಲ್ಲಿ ಡಿಆರ್‌ಎಸ್ ಅನುಷ್ಠಾನ: ಶುಕ್ಲಾ

Update: 2018-03-21 19:01 GMT

ಹೊಸದಿಲ್ಲಿ, ಮಾ.21: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್‌ಎಸ್)ಅನುಷ್ಠಾನಕ್ಕೆ ತರಲಾಗುವುದು ಎಂದು ಐಪಿಎಲ್ ಆಯುಕ್ತ ರಾಜೀವ್ ಶುಕ್ಲಾ ಹೇಳಿದ್ದಾರೆ. ‘‘ಹೌದು, ಇಂತಹ ಯೋಚನೆ ಕಳೆದ ಕೆಲವು ವರ್ಷಗಳಿಂದ ಎಲ್ಲರ ಮನಸ್ಸಿನಲ್ಲಿತ್ತು. ತಂಡ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿದರೆ ಟಿವಿ ರಿಪ್ಲೇ ಪದ್ದತಿಯನ್ನು ಬಳಸಿಕೊಳ್ಳಲಾಗುವುದು’’ ಎಂದು ಶುಕ್ಲಾ ತಿಳಿಸಿದರು. ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯದ ಪ್ರತಿ ಇನಿಂಗ್ಸ್‌ನಲ್ಲಿ ಒಂದು ಬಾರಿ ತಂಡಕ್ಕೆ ಅಂಪೈರ್ ನಿರ್ಧಾರವನ್ನು ಪರಾಮರ್ಶಿಸುವ ಅವಕಾಶ ನೀಡಲಾಗುತ್ತದೆ. ಪಾಕಿಸ್ತಾನ ಸೂಪರ್ ಲೀಗ್ ಬಳಿಕ ಅಂಪೈರ್ ತಪ್ಪುಗಳನ್ನು ಕಡಿಮೆಗೊಳಿಸಲು ಡಿಆರ್‌ಎಸ್ ಪದ್ಧತಿ ಅಳವಡಿಸಿಕೊಳ್ಳುತ್ತಿರುವ ವಿಶ್ವದ ಎರಡನೇ ಟ್ವೆಂಟಿ-20 ಲೀಗ್ ಐಪಿಎಲ್’’ ಎಂದು ಶುಕ್ಲಾ ತಿಳಿಸಿದ್ದಾರೆ. ಐಪಿಎಲ್ ಟೂರ್ನಿಯು ಎ.7 ರಿಂದ ಮೇ 27ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News