ಮ್ಯಾಚ್ ಫಿಕ್ಸಿಂಗ್ ಆರೋಪ: ಶಮಿಗೆ ಕ್ಲೀನ್‌ಚಿಟ್

Update: 2018-03-22 13:30 GMT

 ಹೊಸದಿಲ್ಲಿ, ಮಾ.22: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ ವಿರುದ್ಧ ಕೇಳಿ ಬಂದಿರುವ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಪೂರಕವಾಗಿ ಪುರಾವೆ ಲಭಿಸಿಲ್ಲ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ(ಎಸಿಯು) ಅಧ್ಯಕ್ಷ ನೀರಜ್ ಕುಮಾರ್ ಸುಪ್ರೀಂಕೋರ್ಟ್‌ನಿಂದ ನೇಮಿಲ್ಪಟ್ಟಿರುವ ಆಡಳಿತಾಧಿಕಾರಿ ಸಮಿತಿಗೆ(ಸಿಒಎ) ಗೌಪ್ಯ ವರದಿಯನ್ನು ಸಲ್ಲಿಸಿದ್ದಾರೆ.

 ಎಸಿಯು ಗೌಪ್ಯ ವರದಿಯ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ಸಮಿತಿಯು ಬಿಸಿಸಿಐ ಭ್ರಷ್ಟಾಚಾರ ವಿರೋಧಿ ಸಂಹಿತೆ ಅಡಿ ಶಮಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದೆ. ಶಮಿ ಕ್ಲೀನ್ ಚಿಟ್ ಪಡೆದಿರುವ ಕಾರಣ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿದ್ದು, ‘ಬಿ’ ಶ್ರೇಣಿ ಪಡೆದಿದ್ದಾರೆ. ವಾರ್ಷಿಕ 3 ಕೋ.ರೂ. ಸಂಭಾವನೆ ಪಡೆಯಲಿದ್ದಾರೆ. ಮುಂಬರುವ ಐಪಿಎಲ್‌ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಆಡಲು ಅವಕಾಶ ಪಡೆದಿದ್ದಾರೆ.

   ಶಮಿ ವಿರುದ್ಧ ಆತನ ಪತ್ನಿ ಹಸೀನಾ ಜಹಾನ್ ಮ್ಯಾಚ್ ಫಿಕ್ಸಿಂಗ್ ಆರೋಪದ ಮಾಡಿದ ತಕ್ಷಣ ಆಡಳಿತಾಧಿಕಾರಿ ಸಮಿತಿಯು ಬಿಸಿಸಿಐಗೆ ತನಿಖೆ ನಡೆಸುವಂತೆ ಸೂಚಿಸಿತ್ತು. ದಿಲ್ಲಿಯ ಮಾಜಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ನೇತೃತ್ವದ ಎಸಿಯುಗೆ ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಆಡಳಿತಾಧಿಕಾರಿ ಸಮಿತಿ ಗಡುವು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News