ಬಿಜೆಪಿ ಹೇಳುವಂತೆ ‘ಜಿಹಾದಿ’ಗಳು 23 ಹಿಂದುತ್ವ ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆಯೇ?

Update: 2018-03-23 06:13 GMT

23 ಹಿಂದುತ್ವ ಕಾರ್ಯಕರ್ತರನ್ನು ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿಯು ಆರೋಪಿಸಿದೆ. ಅದು ಪಟ್ಟಿ ಮಾಡಿರುವ ಪ್ರಕರಣಗಳ ಸಂಬಂಧ ಸುದ್ದಿ ಜಾಲತಾಣ scroll.inನ ವರದಿಗಾರರಾದ ಶೃತಿಸಾಗರ್ ಯಮುನನ್ ಕರ್ನಾಟಕದಾದ್ಯಂತ ಪ್ರವಾಸ ಮಾಡಿ ತನಿಖೆ ನಡೆಸಿ ತನಿಖಾ ವರದಿಯೊಂದನ್ನು ಪ್ರಕಟಿಸಿ ಪ್ರಕರಣಗಳ ಸತ್ಯಾಸತ್ಯತೆಗಳನ್ನು ಬಯಲಿಗೆಳೆದಿದ್ದಾರೆ.

ಉಪ್ಪಾರಹಟ್ಟಿಯ ರಸ್ತೆ ಎಷ್ಟೊಂದು ತಗ್ಗುದಿಣ್ಣೆಗಳಿಂದ ಕೂಡಿದೆ ಎಂದರೆ ಹೊಲಗಳ ಮೂಲಕವೇ ಬರುವುದು ಉತ್ತಮ ಎನ್ನುವುದು ಸ್ಥಳೀಯರ ಜಾಣ ಸಲಹೆ. ಆದರೆ ಬೈಕ್ ಹಾಗೂ ಕಾರು ಈ ಹೊಲಗಳಲ್ಲಿರುವ ಕೆಸರಿನಲ್ಲಿ ಜಾರುತ್ತವೆ. ಹೀಗಾಗಿ ಕಲಬುರಗಿ ಜಿಲ್ಲೆಯ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿರುವ ಈ ಗ್ರಾಮಕ್ಕೆ ತಲುಪಬಹುದಾದ ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆ ಎಂದರೆ ಟ್ರ್ಯಾಕ್ಟರ್ ಮಾತ್ರವೇ ಆಗಿದೆ.
ಮಾರ್ಚ್ ತಿಂಗಳ ಒಂದು ಮುಂಜಾನೆ ಗ್ರಾಮದ ಪುಟ್ಟ ಗುಡಿಸಲೊಂದರಲ್ಲಿ ಹರಕು ಚಾಪೆಯ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ವಂದನಾ ಮಹಾದೇವ ಸ್ಕ್ರೋಲ್ ತಂಡದ ಕಣ್ಣಿಗೆ ಬಿದ್ದಿದ್ದರು. ರಾಮನಗರ ಗ್ರಾಮದ ಪಂಚಾಯತ್ ಅಧ್ಯಕ್ಷೆಯಾಗಿರುವ ಆಕೆಯ ಪತಿ ಮಹಾದೇವ ಕಾಳೆ 2016ರ ನವೆಂಬರ್‌ನಲ್ಲಿ ಗ್ರಾಮದ ಹೊರವಲಯದಲ್ಲಿ ಹತ್ಯೆಗೀಡಾಗಿದ್ದರು.
 ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ 2017ರ ಜುಲೈ 8ರಂದು ಬರೆದ ಪತ್ರದಲ್ಲಿ ಆರೋಪಿಸಿರುವಂತೆ 2014, ಮಾರ್ಚ್‌ನಿಂದ ಮೊದಲ್ಗೊಂಡು ಕರ್ನಾಟಕದಲ್ಲಿ ಜಿಹಾದಿ ಶಕ್ತಿಗಳಿಂದ ಹತ್ಯೆಯಾದ 23 ಮಂದಿಯ ಪೈಕಿ ಕಾಳೆ ಕೂಡಾ ಒಬ್ಬರಾಗಿದ್ದಾರೆ. ಈ ಎಲ್ಲ 23 ಜನರು ಹಿಂದುತ್ವ ಕಾರ್ಯಕರ್ತರು ಅಥವಾ ಬಿಜೆಪಿ/ ಆರೆಸ್ಸೆಸ್ ಕಾರ್ಯಕರ್ತರು ಎಂದು ಶೋಭಾ ತನ್ನ ಪತ್ರದಲ್ಲಿ ಬೆಟ್ಟು ಮಾಡಿದ್ದಾರೆ. ಈ ಹತ್ಯೆಗಳಿಗೆ ಸಂಬಂಧಿಸಿದಂತೆ ಶಂಕೆಯ ಮುಳ್ಳು ಮುಸ್ಲಿಂ ಸಂಘಟನೆಗಳಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಮತ್ತು ಕರ್ನಾಟಕ ಫೋರಂ ಫಾರ್ ಡಿಗ್ನಿಟಿ(ಕೆಎಫ್‌ಡಿ) ಕಾರ್ಯಕರ್ತರತ್ತ ತಿರುಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರ ನಿಕಟವರ್ತಿಯಾಗಿರುವ ಶೋಭಾ ಹೇಳಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರವು ಅವರಿಗೆ ರಕ್ಷಣೆ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

‘‘ಕರ್ನಾಟಕದಲ್ಲಿ ರಕ್ತಪಾತ ನಡೆದಿದೆ’’ ಎಂದು ಪತ್ರದಲ್ಲಿ ದಪ್ಪ ಅಕ್ಷರಗಳಲ್ಲಿ ಘೋಷಿಸಲಾಗಿದೆ. ಈ ಪತ್ರದೊಂದಿಗೆ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಈ ಸಾವುಗಳನ್ನು ಬಂಡವಾಳವನ್ನಾಗಿ ಬಳಸಿಕೊಳ್ಳುವ ಸಂಘ ಪರಿವಾರದ ಸಂಘಟಿತ ಪ್ರಯತ್ನವೊಂದು ಆರಂಭಗೊಂಡಿದೆ. ಈ ಸಾವಿನ ಪ್ರಕರಣಗಳ ಬಗ್ಗೆ ರಾಷ್ಟ್ರೀಯ ತನಿಖಾ ಏಜೆನ್ಸಿಯಿಂದ ತನಿಖೆ ನಡೆಸಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.
 ‘‘ಕೇಂದ್ರದಲ್ಲಿ ಬಿಜೆಪಿ ಸರಕಾರ ವ್ಯವಹಾರಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ಹತ್ಯೆಗೆ ಪೂರಕ ವಾತಾವರಣ ಕಲ್ಪಿಸಲಾಗುತ್ತಿದೆ’’ ಎಂದು ಫೆಬ್ರವರಿ 5ರಂದು ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಮೋದಿ ದೂರಿದ್ದರು.
ಮಹಾದೇವ ಕಾಳೆಯವರ ಹೆಸರು ಬಿಜೆಪಿಯ ಪಟ್ಟಿಯಲ್ಲಿ ಸೇರಿರುವ ಕುರಿತು ಸ್ಕ್ರೋಲ್ ವರದಿಗಾರರು ಪ್ರಶ್ನಿಸಿದಾಗ ವಂದನಾ ಆಘಾತ ವ್ಯಕ್ತಪಡಿಸಿದರು. ಇದು ಸರಿಯಲ್ಲ. ಸ್ಥಳೀಯ ಮುಸ್ಲಿಮರ ಜತೆ ನಮಗೆ ಇಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು 50ರ ಆಸುಪಾಸಿನ ವಂದನಾ ಸ್ಪಷ್ಟಪಡಿಸಿದರು.
ತನ್ನ ಪತಿಯನ್ನು ರಾಜಕೀಯ ಎದುರಾಳಿಗಳು ಹತ್ಯೆ ಮಾಡಿದ್ದಾರೆ ಎಂದು ಆಕೆ ತಿಳಿಸಿದರು. ಬಿಜೆಪಿ ಸದಸ್ಯರಾಗಿದ್ದ ಮಹಾದೇವ ಪತ್ನಿ ವಂದನಾಗಿಂತ ಮೊದಲು ಗ್ರಾಮಪಂಚಾಯತ್ ಅಧ್ಯಕ್ಷರಾಗಿದ್ದರು. ಅವರ ಹತ್ಯೆ ಮಾಡಿದವರು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ವ್ಯಕ್ತಿಗಳಾಗಿದ್ದರು ಎಂದು ಆಕೆ ಆರೋಪಿಸಿದರು. ಪೊಲೀಸ್ ಎಫ್‌ಐಆರ್‌ನಲ್ಲಿ ಅಮೋಘಸಿದ್ದ ಅಲಿಯಾಸ್ ಭೀಮಶಾ ಯಾದವ್, ನ್ಯಾನು ಮತ್ತು ಗೋಪು ಎನ್ನುವವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. 2016, ನ.3ರಂದು ಬೆಳಿಗ್ಗೆ ಮಹಾದೇವ ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು ಭಾರವಾದ ವಸ್ತುವಿನಿಂದ ಅವರ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
 ಈ ಮೂವರು ಅದೇ ಪಂಚಾಯತ್ ವ್ಯಾಪ್ತಿಯವರಾಗಿದ್ದು ಕಾಳೆಯವರ ಆದಿವಾಸಿ ಸಮುದಾಯಕ್ಕೇ ಸೇರಿದವರಾಗಿದ್ದಾರೆ. ಅವರು ಅಧ್ಯಕ್ಷರಾಗಲು ಬಯಸಿದ್ದರು. ಆದರೆ ತನ್ನ ಪತಿ ಅವರ ಯತ್ನವನ್ನು ವಿಫಲಗೊಳಿಸಿದ್ದರು ಎಂದು ವಂದನಾ ತಿಳಿಸಿದರು.
ಕರಂದ್ಲಾಜೆಯವರ ಪತ್ರದಲ್ಲಿ ಹೆಸರಿಸಿರುವ 23 ಜನರ ಕುಟುಂಬಗಳನ್ನು ಭೇಟಿ ಮಾಡಲು ಸ್ಕ್ರೋಲ್ ವರದಿಗಾರರು ಫೆಬ್ರವರಿ-ಮಾರ್ಚ್‌ನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದರು. ಪತ್ರದಲ್ಲಿದ್ದ ಒಂದು ಹೆಸರಿನಲ್ಲಿ ಗೊಂದಲವಿದ್ದು, ಇದು ಎರಡು ಹೆಸರಾಗಿರುವ ಸಾಧ್ಯತೆ ಇದ್ದು, ಇದನ್ನು ಸೇರಿಸಿದರೆ ಮೃತರ ಸಂಖ್ಯೆ 24 ಆಗುತ್ತದೆ.
ಆದರೆ ಈ ಪಟ್ಟಿಯಲ್ಲಿರುವ ಒಬ್ಬ ವ್ಯಕ್ತಿ ಇನ್ನೂ ಜೀವಂತವಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಅವರ ಕುಟುಂಬಗಳು ಸ್ಪಷ್ಟಪಡಿಸಿವೆ.ಮತ್ತಿಬ್ಬರನ್ನು ಅವರ ಸಹೋದರಿಯರೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಿಯಲ್ ಎಸ್ಟೇಟ್, ರಾಜಕೀಯ, ಚುನಾವಣೆ ಮತ್ತು ಪ್ರೇಮ ಪ್ರಕರಣಗಳು ಬಹುತೇಕ ಹತ್ಯೆಗಳಿಗೆ ಕಾರಣ ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ. 24ರ ಪೈಕಿ ಕೇವಲ 10 ಪ್ರಕರಣಗಳಲ್ಲಿ ಮಾತ್ರ ಮುಸ್ಲಿಂ ಸಂಘಟನೆಗಳತ್ತ ಬೆಟ್ಟುಮಾಡಲು ಪುರಾವೆಗಳಿವೆ.
ಮೂರು ಪ್ರಕರಣಗಳಲ್ಲಿ ಕೊಲೆಯಾದವರಿಗೂ ಹಿಂದೂ ಸಂಘಟನೆಗಳಿಗೂ ಅವರು ಸಾಯುವವರೆಗೂ ಯಾವುದೇ ಸಂಬಂಧವಿರಲಿಲ್ಲ. ಅವರ ಸಾವಿನ ಬಳಿಕ ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರು ಅವರ ಮನೆಗಳಿಗೆೆ ಭೇಟಿ ನೀಡಿದ್ದರು. ಪ್ರತಿಭಟನೆಗಳನ್ನು ಆಯೋಜಿಸಲಾಗಿತ್ತು. ಸಂಘ ಪರಿವಾರದ ಸಂಘಟನೆಗಳಿಂದ ಪರಿಹಾರಗಳನ್ನೂ ಅವರ ಕುಟುಂಬಗಳಿಗೆ ನೀಡಲಾಗಿತ್ತು. ಈ ಹತ್ಯೆಗಳಿಗೆ ಕೋಮುದ್ವೇಷವೇ ಕಾರಣ ಎಂದು ಕುಟುಂಬಗಳಿಗೆ ಮನದಟ್ಟು ಮಾಡುವ ಪ್ರಯತ್ನವೂ ನಡೆದಿತ್ತು. ಆದರೆ ಕೆಲ ಪ್ರಕರಣಗಳನ್ನು ದೊಡ್ಡ ಅಭಿಯಾನದ ಅಂಗವಾಗಿ ಬಿಂಬಿಸುವುದು ಸಾಧ್ಯವಿಲ್ಲ ಎಂಬ ಮನವರಿಕೆಯಾದ ತಕ್ಷಣ ಈ ಮುಖಂಡರು ಭೇಟಿ ನೀಡುವುದನ್ನು ನಿಲ್ಲಿಸಿದರು.
ಹಲವಾರು ಕುಟುಂಬಗಳು ಇಂದು ಕಹಿ ಭಾವನೆಗಳನ್ನು ಹೊಂದಿವೆ. ತಮ್ಮವರು ಸಂಘ ಪರಿವಾರದ ಸದಸ್ಯರಾಗಿದ್ದು ನಿರರ್ಥಕ ಎಂದೂ ಕೆಲವರು ಹೇಳಿದರು.
ಆದರೆ ತಪ್ಪಿತಸ್ಥರನ್ನು ನ್ಯಾಯದ ಕಟಕಟೆಗೆ ತರುವಲ್ಲಿ ಆಡಳಿತ ಪಕ್ಷ ನಿರ್ಲಕ್ಷ್ಯ ವಹಿಸಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ವಿರುದ್ಧವೂ ಸಿಟ್ಟು ಇದೆ. ಯಾವುದೇ ಸಮುದಾಯಕ್ಕೆ ಸೇರಿದ ಆರೋಪಿಗಳಾಗಿದ್ದರೂ, ಬಹುತೇಕ ಪ್ರಕರಣಗಳು ಅಂತ್ಯ ಕಾಣದೆ ಎಳೆಯಲ್ಪಡುತ್ತಿವೆ. ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ ಹಾಗೂ ಮೃತರ ಕುಟುಂಬಗಳು ಮತ್ತಷ್ಟು ಹಿಂಸೆಯ ಭೀತಿಯಲ್ಲಿ ಬದುಕುತ್ತಿವೆ.
  ಸಂಘ ಪರಿವಾರದ ಪ್ರಚಾರದ ಪರಿಣಾಮ ಕಳೆದ ಒಂದು ದಶಕದಿಂದ ವಿಭಜನಾತ್ಮಕ ರಾಜಕೀಯವು ಹೆಚ್ಚುತ್ತಿರುವುದು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮಾಧ್ಯಮ ವರದಿಗಳ ಕುರಿತು ನಡೆಸಿರುವ ಸಮೀಕ್ಷೆಯಂತೆ 2013-17ರ ನಡುವಿನ ಅವಧಿಯಲ್ಲಿ 741 ಕೋಮು ಸಂಬಂಧಿ ಘಟನೆಗಳು ನಡೆದಿವೆೆ. ಅನೈತಿಕ ಪೊಲೀಸ್‌ಗಿರಿಯಿಂದ ಹಿಡಿದು ಗೋಸಂರಕ್ಷಕರ ಹಾವಳಿ ಮತ್ತು ಪ್ರಾರ್ಥನಾ ಮಂದಿರಗಳಿಗೆ ಹಾನಿಯವರೆಗಿನ ಪ್ರಕರಣಗಳು ಇವುಗಳಲ್ಲಿ ಸೇರಿವೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಸಂಘ ಪರಿವಾರದ ಈ ತಂತ್ರಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರತಿ ಪ್ರಚಾರ ಆರಂಭಿಸಿದೆ. ಎಸ್‌ಡಿಪಿಐ ಮೂಲಕ ಮುಸ್ಲಿಂ ಸಂಘಟನೆಗಳು ಚುನಾವಣಾ ಕಣಕ್ಕೆ ಧುಮುಕುತ್ತಿವೆ. ಕರಾವಳಿ ಜಿಲ್ಲೆಗಳಲ್ಲಿ ಇದರ ಪ್ರಭಾವ ದಟ್ಟವಾಗಿ ಕಂಡುಬರುತ್ತದೆ. ಕೋಮು ಹಿನ್ನೆಲೆಯ ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳು ಈ ಎರಡು ಸಂಘಟನೆಯವರು ಎಂದು ಪೊಲೀಸರು ಹೇಳುತ್ತಾರೆ. ಕೆಲವರು ರೌಡಿಶೀಟರ್‌ಗಳು ಹಾಗೂ ಪೊಲೀಸರಿಗೆ ಬೇಕಾಗಿದ್ದವರು. ಉದಾಹರಣೆಗೆ ಒಬ್ಬ ಆರೋಪಿ, ಹತ್ಯೆ ಮಾಡಿದ ಕೆಲವೇ ವಾರಗಳಲ್ಲಿ ಡಕಾಯಿತಿ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದಾನೆ.
 ಹತ್ಯೆಗೀಡಾದ ಬಹುತೇಕ ಮಂದಿಯ ಕುಟುಂಬಗಳು ಬಡತನದಲ್ಲಿ ಬೇಯುತ್ತಿದ್ದು, ಕೆಳಜಾತಿಗಳ ಸಮುದಾಯಗಳಿಗೆ ಸೇರಿವೆ. ಬಿಜೆಪಿಯು ಅವರ ದುಃಖದಿಂದ ರಾಜಕೀಯ ಲಾಭ ವನ್ನು ಪಡೆದುಕೊಳ್ಳುತ್ತಿದ್ದು, ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಪ್ರಯತ್ನದಲ್ಲಿ ಅವರನ್ನು ತನ್ನ ಪದಾತಿ ಸೈನಿಕರು ಎಂದು ಬಣ್ಣಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಇವರನ್ನು ನಿರ್ಲಕ್ಷಿಸಿದೆ.

ಕುದಿಯುತ್ತಿರುವ ಪಟ್ಟಣ

ಅಶೋಕ್ ಪೂಜಾರಿ ಹತ್ಯೆಯಾಗಿದ್ದಾನೆ ಎನ್ನುವ ವರದಿ ಅತಿರಂಜಿತ. ಮೂಡುಬಿದರೆ ಪಟ್ಟಣದ ಹೊರವಲಯದಲ್ಲಿರುವ ತನ್ನ ಪುಟ್ಟಮನೆಗೆ ಸೀಮಿತವಾಗಿರುವ ಅಶೋಕ್ ಪೂಜಾರಿ 23 ಮಂದಿಯ ಪಟ್ಟಿಯಲ್ಲಿ ಮೊದಲ ಹೆಸರಾಗಿದ್ದಾರೆ. 2015ರ ಸೆಪ್ಟಂಬರ್ 20ರಂದು ಅವರು ಮನೆಗೆ ವಾಪಸಾಗುತ್ತಿದ್ದಾಗ ಆರು ಮಂದಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.
‘‘ನನ್ನ ಕೈ ಇನ್ನೂ ತುಂಬ ನೋಯುತ್ತಿದೆ’’ ಎಂದು ದಾಳಿಯಲ್ಲಿ ತೀವ್ರ ಗಾಯಗೊಂಡಿರುವ ಅಶೋಕ್ ಪೂಜಾರಿ ಹೇಳುತ್ತಾರೆ.
 ಇವರ ಮೇಲೆ ದಾಳಿ ಮಾಡಿದವರ ಪೈಕಿ ಮೂವರನ್ನು ಮುಸ್ತಫಾ (28), ಹನೀಫ್ (36) ಮತ್ತು ಕಬೀರ್ (28) ಎಂದು ಪೊಲೀಸ್ ಆರೋಪಪಟ್ಟಿಯಲ್ಲಿ ಗುರುತಿಸಲಾಗಿದ್ದು, ಇವರೆಲ್ಲರೂ ಪಿಎಫ್‌ಐ ಸದಸ್ಯರಾಗಿದ್ದು, ತನ್ನನ್ನು ಬಜರಂಗ ದಳ ಸದಸ್ಯ ಪ್ರಶಾಂತ್ ಪೂಜಾರಿ ಎಂದು ತಪ್ಪಾಗಿ ಭಾವಿಸಿ ಈ ದಾಳಿಯನ್ನು ನಡೆಸಿದ್ದರು ಎಂದು ಪೂಜಾರಿ ಹೇಳುತ್ತಾರೆ. ಅಶೋಕ್ ಪೂಜಾರಿ ಕೂಡಾ ಬಜರಂಗದಳ ಸದಸ್ಯರು. ಆದರೆ ಎಂದೂ ಸಕ್ರಿಯರಾಗಿರಲಿಲ್ಲ. ದೇವಸ್ಥಾನದ ಕಾರ್ಯಕ್ರಮಗಳಲ್ಲಿ ವಾದ್ಯಗಳನ್ನು ನುಡಿಸುವ ಮೂಲಕ ಅವರು ಜೀವನ ಸಾಗಿಸುತ್ತಿದ್ದರು.
ದಾಳಿಯ ಬಳಿಕ ಅಶೋಕ ಪೂಜಾರಿ ಮೂರು ತಿಂಗಳು ಆಸ್ಪತ್ರೆಯಲ್ಲಿದ್ದು, 8 ಲಕ್ಷ ರೂ. ವೈದ್ಯಕೀಯ ಬಿಲ್ ಪಾವತಿಸು ವಂತಾಗಿದ್ದು, ಅದನ್ನು ಹಿಂದೂ ಸಂಘಟನೆಗಳು ಭರಿಸಿದ್ದವು. ಕರಂದ್ಲಾಜೆ ಸಿದ್ಧಪಡಿಸಿದ ಮೃತರ ಪಟ್ಟಿಯಲ್ಲಿ ತನ್ನ ಹೆಸರನ್ನು ಕಂಡು ಅಶೋಕ ಪೂಜಾರಿಯವರಿಗೆ ಆಘಾತವಾಗಿತ್ತು. ಟಿವಿ ವಾಹಿನಿಗಳ ವರದಿಗಾರರು ಅವರ ಮನೆಗೆ ಭೇಟಿ ನೀಡಿಯೂ ಆಗಿತ್ತು. ಬಳಿಕ ಕರಂದ್ಲಾಜೆ ಪೂಜಾರಿಯವರನ್ನು ಭೇಟಿಯಾಗಿ ಕ್ಷಮೆ ಯಾಚಿಸಿದ್ದರು.
ಅಶೋಕ್ ಪೂಜಾರಿ ಮೇಲೆ ಹಲ್ಲೆ ನಡೆಸಿದ ಪಿಎಫ್‌ಐ ಸದಸ್ಯರೇ ಎರಡು ವಾರಗಳ ಬಳಿಕ, ಅಕ್ಟೋಬರ್ 9ರಂದು ಪ್ರಶಾಂತ್ ಪೂಜಾರಿಯನ್ನು ಹತ್ಯೆ ಮಾಡಿದ್ದಾರೆ ಎನ್ನುವುದು ಪೊಲೀಸ್ ಆರೋಪಪಟ್ಟಿಯ ಸಾರ.
ಪ್ರಶಾಂತ್ ಪೂಜಾರಿ (29) ಮೂಡುಬಿದರೆಯಲ್ಲಿ ಹೂವಿನ ಅಂಗಡಿ ಇಟ್ಟುಕೊಂಡಿದ್ದರು. ಆರು ಮಂದಿಯ ಗ್ಯಾಂಗ್ ಮೂರು ಬೈಕ್‌ಗಳಲ್ಲಿ ಆಗಮಿಸಿ, ಹೂವು ದಾಸ್ತಾನು ಮಾಡುತ್ತಿದ್ದ ಕೋಣೆಯ ಕಡೆಯಿಂದ ಬಂದು ಹಿಂಬದಿಯಿಂದ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿತು ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.
ಪ್ರಶಾಂತ ಪೂಜಾರಿಯವರ ಕುಟುಂಬದ ಪ್ರಕಾರ, ಗೋಸಂರಕ್ಷಣೆಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದೆ. ಹಲವು ಕಡೆಗಳಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದುದನ್ನು ಅವರು ತಡೆದಿದ್ದರು ಹಾಗೂ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳ ಜತೆ ಸಂಘರ್ಷ ಹೊಂದಿದ್ದರು ಎಂದು ತಂದೆ ಆನಂದ ಪೂಜಾರಿ ಹೇಳುತ್ತಾರೆ. ಮಗನ ಭಾವಚಿತ್ರ ತೂಗುಹಾಕಿದ್ದ ಹಜಾರದಲ್ಲಿ ಕುಳಿತಿದ್ದ ಅವರು ಪ್ರತೀ ಮಾತಿನಲ್ಲೂ ಪಿಎಫ್‌ಐ ಹೆಸರನ್ನು ಗಟ್ಟಿಯಾಗಿ ಹೇಳುತ್ತಿದ್ದರು. ಬಹುತೇಕ ಮಂದಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇದು ನ್ಯಾಯವೇ ಎಂದು ಅವರು ಪ್ರಶ್ನಿಸುತ್ತಾರೆ.
ಪ್ರಶಾಂತ್ ಪೂಜಾರಿ ಸಾಯುವ ಕೆಲ ದಿನಗಳ ಮೊದಲು ಉತ್ತರ ಪ್ರದೇಶದ ದಾದ್ರಿಯಲ್ಲಿ ಮತಾಂಧರ ಗುಂಪು ಮುಹಮ್ಮದ್ ಅಖ್ಲಾಕ್ ಎಂಬ ವ್ಯಕ್ತಿಯನ್ನು ಫ್ರಿಡ್ಜ್‌ನಲ್ಲಿ ಗೋಮಾಂಸವಿದೆ ಎಂಬ ಶಂಕೆಯಿಂದ ಮನೆಯಿಂದ ಹೊರಗೆಳೆದು ಥಳಿಸಿ ಹತ್ಯೆ ಮಾಡಿತ್ತು. ಪ್ರಶಾಂತ್ ಪೂಜಾರಿ ಹತ್ಯೆಯನ್ನು ಇದಕ್ಕೆ ಪರ್ಯಾಯವಾಗಿ ಬಿಂಬಿಸಲು ಸಂಘ ಪರಿವಾರ ಪ್ರಯತ್ನಿಸಿತು. ಮೂಡುಬಿದಿರೆ ದಾಳಿಯನ್ನು ಈ ಅರ್ಥದಲ್ಲಿ ಬಿಂಬಿಸಿದರು. ಇಡೀ ಪ್ರದೇಶದಲ್ಲಿ ಬಂದ್ ಆಯೋಜಿಸಿ, ಪೊಲೀಸ್ ಠಾಣೆಯ ಮುಂದೆ ದೊಡ್ಡ ಪ್ರತಿಭಟನೆ ನಡೆಸಲಾಯಿತು.
ಕೋಮು ರಾಜಕೀಯದಾಟದ ನಡುವೆಯೇ ಅಕ್ಟೋಬರ್ 15ರಂದು ಪಟ್ಟಣದಲ್ಲಿ ವಾಮನ ಪೂಜಾರಿ ಎಂಬ ತೆಂಗಿನಕಾಯಿ ವ್ಯಾಪಾರಿ ಹತ್ಯೆ ಸಾವನ್ನಪ್ಪಿದ್ದರು. ಇವರು ಪ್ರಶಾಂತ್ ಪೂಜಾರಿಯ ವರ ಹೂವಿನ ಅಂಗಡಿಯ ಪಕ್ಕದಲ್ಲಿ ಅಂಗಡಿ ಇಟ್ಟುಕೊಂಡಿದ್ದರು. ಅಶೋಕ್ ಮತ್ತು ಪ್ರಶಾಂತ್ ಅವರಂತೆ ವಾಮನ್ ಕೂಡಾ ಹಿಂದುಳಿದ ವರ್ಗದ ಬಿಲ್ಲವ ಸಮುದಾಯಕ್ಕೆ ಸೇರಿದವರು.
‘‘ಪ್ರಶಾಂತ್ ಹತ್ಯೆಯಾಗುವುದನ್ನು ವಾಮನ ಪೂಜಾರಿ ನೋಡಿದ್ದರು’’ ಎಂದು ಪ್ರಶಾಂತ್ ತಂದೆ ಹೇಳುತ್ತಾರೆ. ಇವರನ್ನೂ ಜಿಹಾದಿ ಶಕ್ತಿಗಳು ಹತ್ಯೆ ಮಾಡಿವೆ ಎಂಬ ಉಲ್ಲೇಖ ಕರಂದ್ಲಾಜೆ ಪತ್ರದಲ್ಲಿದೆ.
ಆದರೆ ವಾಮನ ಪೂಜಾರಿ ಕುಟುಂಬ ಹಾಗೂ ಪೊಲೀಸರು ಹೇಳುವಂತೆ ವಾಸ್ತವವಾಗಿ ಅವರು ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶಾಂತ್ ಹತ್ಯೆ ಬಳಿಕ ವಾಮನ ಪ್ರತಿಭಟನೆ ನಡೆಸಿದ್ದರು ಎಂದು ಪತ್ನಿ ಸರೋಜಿನಿ ಹೇಳುತ್ತಾರೆ. ‘‘ಪದೇ ಪದೇ ಆ ಬಗ್ಗೆ ಮಾತನಾಡುತ್ತಿದ್ದ ಅವರು ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ’’ ಎಂದು ಅವರು ಹೇಳಿದರು. ಈ ಹತ್ಯೆಗೆ ಕೋಮು ಹಿನ್ನೆಲೆ ಇರಬಹುದು ಎಂಬ ಸಂದೇಹ ವ್ಯಕ್ತಪಡಿಸುವಂತೆ ನೆರೆಯವರು ಒತ್ತಾಯಿಸಿದಾಗಲೂ ಅದಕ್ಕೆ ಆಕೆ ನಿರಾಕರಿಸಿದ್ದರು.
 ವಾಮನ ಪೂಜಾರಿ ತಮ್ಮ ನಂಟು ಹೊಂದಿದ್ದರು ಎಂದು ಹಿಂದುತ್ವ ಸಂಘಟನೆಗಳು ಹೇಳಿಕೊಂಡಾಗ ಸರೋಜಿನಿ ಆಘಾತಗೊಂಡಿದ್ದರು, ‘‘ಪತಿಯ ಹೆಸರು ಪಟ್ಟಿಯಲ್ಲಿ ಸೇರಿಸುವ ಮುನ್ನ ಕರಂದ್ಲಾಜೆ ನಮ್ಮನ್ನು ಕೇಳಬೇಕಿತ್ತು’’ ಎನ್ನುವುದು ಅವರ ಅಭಿಪ್ರಾಯ. ವಾಮನ ಪೂಜಾರಿ ಸಾವಿನಲ್ಲಿ ಯಾವ ಸಂಶಯವೂ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸುತ್ತಾರೆ.
ಬಿಜೆಪಿ ಹೇಳುವಂತೆ ಮೂಡುಬಿದಿರೆಯಲ್ಲಿ ಹತ್ಯೆಯಾದ ಮೂವರ ಪೈಕಿ ಒಬ್ಬರು ಜೀವಂತ ಇದ್ದರೆ, ಮತ್ತೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಪ್ರಶಾಂತ್ ಪೂಜಾರಿ ಹತ್ಯೆಯನ್ನು ಕಣ್ಣಾರೆ ಕಂಡ ವಾಮನ ಪೂಜಾರಿ ಕೋರ್ಟ್‌ನಲ್ಲಿ ಸಾಕ್ಷ್ಯ ಹೇಳಬಾರದು ಎಂಬ ಕಾರಣಕ್ಕೆ ಅವರನ್ನು ಹತ್ಯೆ ಮಾಡ ಲಾಗಿದೆ ಎನ್ನುವುದು ಬಿಜೆಪಿ ವಾದ. ಆಟೊರಿಕ್ಷಾ ಚಾಲಕರಿಂದ ಹಿಡಿದು ವ್ಯಾಪಾರಿಗಳವರೆಗೆ ಎಲ್ಲರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸಹೋದರಿಯ ಕ್ರೋಧ

ಕಾರ್ತಿಕ್‌ರಾಜ್ (26) ಫಿಟ್‌ನೆಸ್ ಇಷ್ಟಪಡುತ್ತಿದ್ದವರು ಹಾಗೂ ಶ್ವಾನಪ್ರೇಮಿ. ಕೊಣಾಜೆ ಗ್ರಾಮದ ಇವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದರು. ಮಂಗಳೂರಿನಲ್ಲಿ ಆಗಷ್ಟೇ ಕೆಲಸಕ್ಕೆ ಸೇರಿದ್ದ ಇವರನ್ನು 2016ರ ಅಕ್ಟೋಬರ್‌ನಲ್ಲಿ ಕೊಲೆ ಮಾಡಲಾಗಿತ್ತು.
 ಅಕ್ಟೋಬರ್ 23ರಂದು ಮುಂಜಾನೆ ಅವರ ತಂದೆ ಉಮೇಶ್ ಗಾಣಿಗ ಅವರಿಗೆ ಕರೆ ಬಂದಿತ್ತು. ನಿಮ್ಮ ಮಗ ಜಾಗಿಂಗ್‌ನಲ್ಲಿದ್ದಾಗ ಅಪಘಾತವಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ನೀಡಲಾಗಿತ್ತು. ಕಾರ್ತಿಕ್ ನಿಧನದ ಬಳಿಕ ಹಿಂದೂ ಸಂಘಟನೆಗಳು ಅಂತ್ಯಸಂಸ್ಕಾರದ ವೇಳೆ ದೊಡ್ಡ ಗುಂಪು ಸೇರಿಸಿದವು. ಈತನ ತಂದೆ ಬಿಜೆಪಿ ಮುಖಂಡರಾಗಿರುವುದರಿಂದ ಮುಸ್ಲಿಂ ಮೂಲಭೂತವಾದಿಗಳು ಈತನನ್ನು ಹತ್ಯೆ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿಸಿದರು. ಯಡಿಯೂರಪ್ಪಕೂಡಾ ಇವರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು. ಆದರೆ ಪೊಲೀಸರು ರಾಜ್ ಅವರ ಸಹೋದರಿಯನ್ನು ವಿಚಾರಣೆಗೆ ಗುರಿಪಡಿಸಿದ ಬಳಿಕ ಪ್ರತಿಯೊಂದೂ ಬದಲಾಯಿತು.
‘‘ಶಂಕಿತರನ್ನು ಗುರುತಿಸುವ ಸಲುವಾಗಿ ವೀಡಿಯೊ ದೃಶ್ಯಾವಳಿ ನೋಡಲು ನನ್ನ ಮಗಳನ್ನು ಪೊಲೀಸರು ಕರೆದೊಯ್ದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಂಜೆಯಾದರೂ ಮಗಳು ವಾಪಸಾಗಲಿಲ್ಲ. ಇಬ್ಬರು ಹಂತಕರ ಜತೆ ಶಾಮೀಲಾಗಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಗಿತ್ತು’’ ಎಂದು ಉಮೇಶ ಗಾಣಿಗ ತಿಳಿಸಿದರು.
ಈಕೆಯ ಪತಿ ವಿದೇಶದಲ್ಲಿದ್ದು, ಈಕೆ ಹತ್ಯೆ ಆರೋಪಿಗಳಲ್ಲೊಬ್ಬನ ಜತೆಗೆ ಪ್ರೇಮಸಂಬಂಧ ಹೊಂದಿದ್ದಳು. ಇದು ಸಹೋದರನಿಗೆ ತಿಳಿದು ಬಂತು. ಪತಿ ಹಾಗೂ ತಂದೆಗೆ ಗೊತ್ತಾಗದಂತೆ ಆತನನ್ನು ಮುಗಿಸಿಬಿಡುವಂತೆ ಪ್ರಿಯಕರನಿಗೆ ಸೂಚಿಸಿದ್ದಳು ಎಂದು ಆರೋಪಪಟ್ಟಿ ಹೇಳಿದೆ.
ವರ್ಷಗಳ ಹಿಂದೆ ರಾಜ್ ನೆಟ್ಟ ತೆಂಗಿನ ಮರದಿಂದ ಎಳನೀರು ಕಿತ್ತುಕೊಟ್ಟ ಗಾಣಿಗ, ತನ್ನ ಮಗನನ್ನು ಕಣ್ಣಿಗೆ ಮೆಣಸಿನಪುಡಿ ಎರಚಿ ಸಾಯುವವರೆಗೂ ಹೊಡೆದರು ಎಂದು ವಿವರಿಸಿದರು. ‘‘ಇಬ್ಬರು ಹಂತಕರು ಬಹುಶಃ ಮಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರಬೇಕು. ಬಹುಶಃ ರಾಜ್‌ಗೆ ಎಚ್ಚರಿಕೆ ನೀಡಲು ಆಕೆ ಸೂಚಿಸಿರಬೇಕು’’ ಎಂದು ಹೇಳುವಾಗ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು.
1995ರಿಂದ 2000ವರೆಗೆ ಬಿಜೆಪಿಯಿಂದ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಗಾಣಿಗ, ದೀರ್ಘಕಾಲದಿಂದ ರಾಜಕೀಯದಿಂದ ದೂರ ಉಳಿದಿದ್ದರು. ‘‘ರಾಜ್ ಎಂದೂ ಹಿಂದೂ ಸಂಘಟನೆಗಳ ಜತೆ ಗುರುತಿಸಿಕೊಂಡಿರಲಿಲ್ಲ. ಮುಸ್ಲಿಮರು ಮಗನನ್ನು ಹತ್ಯೆ ಮಾಡಿದ್ದಾರೆ ಎಂಬ ಹೇಳಿಕೆಗಳನ್ನು ನಾನೆಂದೂ ನಂಬಿರಲಿಲ್ಲ’’ ಎಂದು ಹೇಳಿದ ಗಾಣಿಗ, ‘‘ನಮ್ಮ ನೆರೆಯವರು ಮುಸ್ಲಿಮರು. ನಾವು ಶಾಂತಿಯಿಂದಿದ್ದೇವೆ’’ ಎಂದು ಅವರು ಹೇಳಿದರು.

ಕುಟುಂಬದ್ವೇಷ

ಕೊಣಾಜೆಯಿಂದ 200 ಕಿಲೋಮೀಟರ್ ದೂರದ ಶಿವಮೊಗ್ಗದಲ್ಲಿ ಕೋಮುಸಂಘರ್ಷದ ಹಿನ್ನೆಲೆಯಲ್ಲಿ 2015ರ ಫೆಬ್ರವರಿಯಲ್ಲಿ ಬೆಳಕಿಗೆ ಬಂದದ್ದು ಮತ್ತೊಂದು ಕುಟುಂಬ ವ್ಯಾಜ್ಯ. ಫೆಬ್ರವರಿ 19ರಂದು ಪಿಎಫ್‌ಐ ಪಟ್ಟಣದಲ್ಲಿ ರ್ಯಾಲಿ ಆಯೋಜಿಸಿತ್ತು. ಇದು ಹಿಂದುತ್ವ ಗುಂಪಿನ ಜತೆ ಸಂಘರ್ಷಕ್ಕೆ ಕಾರಣವಾಯಿತು. ಗದ್ದಲ, ಕಲ್ಲು ತೂರಾಟ ನಡೆದು, ನಿಷೇಧಾಜ್ಞೆ ಜಾರಿಯಾಯಿತು. ರ್ಯಾಲಿ ನಡೆದ ಕೆಲವೇ ಗಂಟೆಗಳಲ್ಲಿ ವಿಶ್ವನಾಥ್ ಶೆಟ್ಟಿ (35) ಎಂಬ ಹಿಂದುತ್ವ ಕಾರ್ಯಕರ್ತನ ಹತ್ಯೆಯಾಗಿತ್ತು.
ಎರಡು ದಿನ ಬಳಿಕ ಮಂಜುನಾಥ್ (33) ಎಂಬ ವ್ಯಕ್ತಿ ಕೂಡಾ ಮೃತಪಟ್ಟರು. ಈ ಇಬ್ಬರನ್ನೂ ಮುಸ್ಲಿಂ ಉಗ್ರರು ಹತ್ಯೆ ಮಾಡಿದ್ದಾರೆ ಎಂದು ಸಂಘ ಪರಿವಾರ ಹಾಗೂ ಬಿಜೆಪಿ ಆಪಾದಿಸಿದ್ದವು. ಆದರೆ ಈ ಎರಡೂ ಹೆಸರುಗಳು ಕರಂದ್ಲಾಜೆ ಪಟ್ಟಿಯಲ್ಲಿಲ್ಲ. ಅದರ ಬದಲಾಗಿ ವೆಂಕಟೇಶ್ ಎಂಬ ಹಿಂದುತ್ವ ಕಾರ್ಯಕರ್ತನನ್ನು ಫೆಬ್ರವರಿ 19ರಂದು ಶಿವಮೊಗ್ಗದಲ

Writer - ಶೃತಿಸಾಗರ್ ಯಮುನನ್, scroll.in

contributor

Editor - ಶೃತಿಸಾಗರ್ ಯಮುನನ್, scroll.in

contributor

Similar News

ಜಗದಗಲ
ಜಗ ದಗಲ