ಚೀನಾ ಸಮುದ್ರದಲ್ಲಿ ಅಮೆರಿಕದ ‘ನೌಕಾಯಾನ ಸ್ವಾತಂತ್ರ್ಯ’ ಅಭಿಯಾನ

Update: 2018-03-24 17:33 GMT

ಬೀಜಿಂಗ್, ಮಾ. 24: ಅಮೆರಿಕದ ಯುದ್ಧನೌಕೆಯೊಂದು ಶುಕ್ರವಾರ ದಕ್ಷಿಣ ಚೀನಾ ಸಮುದ್ರದಲ್ಲಿ ‘ನೌಕಾಯಾನ ಸ್ವಾತಂತ್ರ’ ಅಭಿಯಾನ ನಡೆಸಿದ್ದು, ಚೀನಾ ನಿರ್ಮಿಸಿರುವ ಕೃತಕ ದ್ವೀಪವೊಂದರಿಂದ 12 ನಾಟಿಕಲ್ ಮೈಲಿ ಅಂತರದವರೆಗೆ ಬಂದಿದೆ.

ಆಯಕಟ್ಟಿನ ಜಲಪ್ರದೇಶಗಳಲ್ಲಿ ನೌಕಾಯಾನ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವ ಚೀನಾದ ಪ್ರಯತ್ನಗಳನ್ನು ವಿರೋಧಿಸುವ ಉದ್ದೇಶವನ್ನು ಅಮೆರಿಕದ ಈ ಕ್ರಮ ಹೊಂದಿದೆ ಎಂದು ಅಮೆರಿಕದ ಅಧಿಕಾರಿಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News