ಅಮೆರಿಕಾದ್ಯಂತ ತೀವ್ರಗೊಂಡ ‘ಬಂದೂಕು ವಿರೋಧಿ’ ಚಳವಳಿ

Update: 2018-03-25 17:49 GMT

 ವಾಶಿಂಗ್ಟನ್, ಮಾ.25: ಬಂದೂಕುಗಳನ್ನು ಹೊಂದುವ ಕಾನೂನುಗಳನ್ನು ಬಿಗಿಗೊಳಿಸಬೇಕೆಂದು ಆಗ್ರಹಿಸಿ ಅಮೆರಿಕದೆಲ್ಲೆಡೆ ಶನಿವಾರ ನಡೆದ ರ‍್ಯಾಲಿಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಲಕ್ಷಾಂತರ ಮಂದಿ ಪಾಲ್ಗೊಂಡಿದ್ದರು. ‘‘ಮತ್ತೆಂದೂ ಫ್ಲೋರಿಡಾ ಹೈಸ್ಕೂಲ್ ಹತ್ಯಾಕಾಂಡದಂತಹ ಘಟನೆಗಳು ನಡೆಯದಿರಲಿ’’ ಎಂಬ ಘೋಷಣೆಗಳನ್ನು ಸಹಸ್ರಾರು ಮಂದಿ ಒಕ್ಕೊರಲಿನಿಂದ ಕೂಗಿದರು.

 ಅಮೆರಿಕದಲ್ಲಿ ಇತ್ತೀಚಿನ ದಶಕಗಳಲ್ಲಿ ನಡೆದ ಅತಿ ದೊಡ್ಡ ಪ್ರತಿಭಟನೆಗಳೊಂದೆನಿಸಿರುವ ಇಂದಿನ ರ‍್ಯಾಲಿಗಳಲ್ಲಿ ಹಾಲಿವುಡ್ ತಾರೆಯರಾದ ನಿಕ್ ಒಫರ್‌ಮ್ಯಾನ್, ಜಾರ್ಜ್ ಕ್ಲೂನಿ, ಸಿಂಥಿಯಾ ನಿಕ್ಸನ್, ಕಿಮ್ ಕಾರ್ದಿಶಾನ್ ಮತ್ತಿತರರು ಭಾಗವಹಿಸಿದ್ದರು. ಫೆಬ್ರವರಿ 14ರಂದು ಫ್ಲೊರಿಡಾದ ಪಾರ್ಕ್‌ಲ್ಯಾಂಡ್ ಹೈಸ್ಕೂಲ್‌ನಲ್ಲಿ ನಡೆದ ಶೂಟೌಟ್‌ನಲ್ಲಿ 17 ಮಂದಿ ಸಾವನ್ನಪ್ಪಿದ ಘಟನೆಯ ಬಳಿಕ ಅಮೆರಿಕಾದ್ಯಂತ, ದೇಶದ ಸಡಿಲವಾದ ಬಂದೂಕುಕಾನೂನುಗಳ ವಿರುದ್ಧ ಮಾರ್ಚ್ ಫಾರ್ ಆವರ್ ಲಿವ್ಸ್ (ಪ್ರಾಣಗಳಿಗಾಗಿ ನಮ್ಮ ನಡಿಗೆ) ರ‍್ಯಾಲಿಗಳು ನಡೆಯುತ್ತಿವೆ.

ಅಟ್ಲಾಂಟಾ, ಬಾಲ್ಟಿಮೋರ್, ಬಾಸ್ಟನ್,ಚಿಕಾಗೊ,ಲಾಸ್‌ಏಂಜಲೀಸ್,ಮಿಯಾಮಿ, ಮಿನ್ನಿಯಾ ಪೊಲಿಸ್,ನ್ಯೂಯಾರ್ಕ್, ಸ್ಯಾನ್‌ಡಿಯಾಗೊ ಹಾಗೂ ಸೈಂಟ್‌ಲೂಯಿಗಳಲ್ಲಿ ಶನಿವಾರ ಬೃಹತ್ ರ‍್ಯಾಲಿಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News