ದೇಶದ ಮೊದಲ ಪ್ರಯಾಣಿಕ, ಸಾರಿಗೆ ವಿಮಾನ ‘ಸಾರಸ್’ ಸೇವೆಗೆ ಸಿದ್ದ
ಬೆಂಗಳೂರು, ಮಾ. 25: ದೇಶದ ಮೊದಲ ಪ್ರಯಾಣಿಕ ಹಾಗೂ ಸಾರಿಗೆ ವಿಮಾನ ಸಾರಸ್ ಅನ್ನು ಭಾರತದ ವಿಜ್ಞಾನಿಗಳು ಸಿದ್ದಗೊಳಿಸಿದ್ದಾರೆ. ಇದು ನರೇಂದ್ರ ಮೋದಿ ಅವರ ಹವಾಯಿ ಚಪ್ಪಲಿ ಹಾಕುವ ಜನರು ವಿಮಾನದಲ್ಲಿ ಹಾರಾಡಬೇಕು ಎಂಬ ಕನಸನ್ನು ನನಸು ಮಾಡಲಿದೆ.
ಬೆಂಗಳೂರಿನ ನ್ಯಾಶನಲ್ ಏರೋಸ್ಪೇಸ್ ಲ್ಯಾಬೊರೇಟರಿ ಈ ವಿಮಾನವನ್ನು ವಿನ್ಯಾಸಗೊಳಿಸಿದೆ ಹಾಗೂ ಭಾರತೀಯ ವಾಯು ಪಡೆಯ ಪೈಲೆಟ್‌ಗಳು ಇದನ್ನು ಪರೀಕ್ಷಿಸುತ್ತಿದ್ದಾರೆ. ಕಳೆದ 18 ತಿಂಗಳಿಂದ ಇದರ ನಿರ್ಮಾಣ ನಡೆಯುತ್ತಿದ್ದು, 2009ರಲ್ಲಿ ಪರೀಕ್ಷೆ ವೇಳೆ ಈ ವಿಮಾನ ಪತನಗೊಂಡು ಇಬ್ಬರು ಪೈಲೆಟ್‌ಗಳು ಮೃತಪಟ್ಟಿದ್ದರು. ‘‘ಪತನದ ಬಳಿಕ ನಾವು ಕಾರಣ ಕಂಡುಕೊಂಡೆವು. ಅದು ಕಾರ್ಯವಿಧಾನದ ತಪ್ಪು. ಇದರ ಹೊರತುಪಡಿಸಿ ಹಲವು ವಿನ್ಯಾಸದ ಕೊರತೆಯನ್ನು ನಮ್ಮ ತಂಡ ಕೂಡಲೇ ಸರಿಪಡಿಸಿತು. ಮುಖ್ಯವಾಗಿ ನಿರ್ವಹಣಾ ಗುಣಮಟ್ಟ ಹಾಗೂ ನಿಯಂತ್ರಣ ಸಾಮರ್ಥ್ಯ’’ ಎಂದು ನ್ಯಾಶನಲ್ ಏರೋಸ್ಪೇಸ್ ಲ್ಯಾಬೊರೇಟರಿಯ ನಿರ್ದೇಶಕ ಜಿತೇಂದ್ರ ಜೆ. ಜಾಧವ್ ತಿಳಿಸಿದ್ದಾರೆ.
ಈ ಯೋಜನೆಯನ್ನು 2016ರಲ್ಲಿ ಪುನರುಜ್ಜೀನವಗೊಳಿಸಲಾಯಿತು. 7000 ಕಿ.ಗ್ರಾಂ. ವಿಮಾನ ಈ ವರ್ಷ ಈಗಾಗಲೇ ಎರಡು ಬಾರಿ ಯಶಸ್ವಿಯಾಗಿ ಹಾರಾಟ ನಡೆಸಿದೆ. 2009ರಲ್ಲಿ ಪರೀಕ್ಷೆ ವೇಳೆ ಅಪಘಾತ ನಡೆದ ಬಳಿಕ ಈ ಹಿಂದಿನ ಸರಕಾರ ಯೋಜನೆಯನ್ನು ಮೂಲೆಗೆ ಎಸೆದಿತ್ತು ಎಂದು ಕೇಂದ್ರ ವಿಜ್ಞಾನ ಸಚಿವ ಹರ್ಷ ವರ್ಧನ ತಿಳಿಸಿದ್ದಾರೆ.
ಏಯರ್ ಟ್ಯಾಕ್ಸಿ, ವೈಮಾನಿಕ ಶೋಧನೆ, ಸರ್ವೇ, ಪ್ರಾಕೃತಿಕ ವಿಕೋಪ ನಿರ್ವಹಣೆ, ಗಡಿ ಗಸ್ತು, ತಟ ರಕ್ಷಣೆ, ಆ್ಯಂಬುಲೆಸ್ ಸೇವೆಯಂತಹ ಹಲವು ಸೇವೆಗಳಿಗೆ ಸಾರಸ್ ಎಂಕೆ2 ಸೂಕ್ತ. ಏರ್ ಟ್ಯಾಸ್ಸಿ ಮೂಲಕ ಪ್ರಯಾಣಿಕರ ಸಂಪರ್ಕಕ್ಕೆ ಹಾಗೂ ಉಡಾನ್ ಯೋಜನೆ ಅಡಿಯಲ್ಲಿ ಸಾರಿಗೆ ನಿರ್ವಹಿಸಲು ಕೂಡ ಈ ವಿಮಾನ ಉತ್ತಮ.
ಹರ್ಷ ವರ್ಧನ್, ಕೇಂದ್ರ ವಿಜ್ಞಾನ ಸಚಿವ