ಹಾಸ್ಟೆಲ್‌ ಕಾರಿಡಾರ್‌ನಲ್ಲಿ ನ್ಯಾಪ್ಕಿನ್ ಪತ್ತೆ: ವಿವಿ ವಿದ್ಯಾರ್ಥಿನಿಯರ 'ದೇಹ ತಪಾಸಣೆ' ಮಾಡಿದ ಹಾಸ್ಟೆಲ್ ಸಿಬ್ಬಂದಿ

Update: 2018-03-26 05:13 GMT

ಭೋಪಾಲ್, ಮಾ.26: ವಾಷ್‌ರೂಂಗೆ ಹೋಗುವ ಕಾರಿಡಾರ್‌ನಲ್ಲಿ ಬಳಸಿದ ನ್ಯಾಪ್ಕಿನ್ ಪತ್ತೆಯಾದ ಹಿನ್ನೆಲೆಯಲ್ಲಿ ಹಾಸ್ಟೆಲ್ ಸಿಬ್ಬಂದಿ ಎಲ್ಲ ವಿದ್ಯಾರ್ಥಿನಿಯರ ’ಬಾಡಿ ಸರ್ಚ್’ ಮಾಡಿದ ಘಟನೆ ಸಾಗರದ ಡಾ.ಎಚ್.ಎಚ್.ಗೌರ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ. ಈ ಬಗ್ಗೆ ರವಿವಾರ ವಿದ್ಯಾರ್ಥಿನಿಯರು ಕುಲಪತಿಗೆ ದೂರು ನೀಡಿದ್ದಾರೆ.

ಕುಲಪತಿ ಪ್ರೊ.ಆರ್.ಪಿ.ತಿವಾರಿ ಘಟನೆ ಬಗ್ಗೆ ತನಿಖೆಗೆ ಆದಶಿಸಿದ್ದಾರೆ. ಹಾಸ್ಟೆಲ್‌ನ ವಿದ್ಯಾರ್ಥಿ ಕ್ಷೇಮಪಾಲಕ ಅಧಿಕಾರಿ ರವಿವಾರ ಬೆಳಗ್ಗೆ ಹಾಸ್ಟೆಲ್ ವಾರ್ಡನ್ ಸಮ್ಮುಖದಲ್ಲೇ ದೇಹ ತಪಾಸಣೆ ನಡೆಸಿದ್ದಾರೆ ಎನ್ನಲಾಗಿದೆ. ಯಾವ ವಿದ್ಯಾರ್ಥಿನಿ ಋತುಸ್ರಾವದಲ್ಲಿದ್ದಾಳೆ ಎಂದು ಪತ್ತೆ ಮಾಡಿ, ಆಕೆ ಬಳಸಿದ ನ್ಯಾಪ್ಕಿನ್ ಎಸೆದಿರಬೇಕು ಎಂಬ ನಿರ್ಧಾರಕ್ಕೆ ಬರುವ ಸಲುವಾಗಿ ಈ ಕ್ರಮ ಕೈಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಆಪಾದಿಸಿದ್ದಾರೆ.

"ಘಟನೆ ಬಗ್ಗೆ ವಾರ್ಡನ್ ಜತೆ ಮಾತನಾಡಿದ್ದೇನೆ. ಆದರೆ ಅವರು ಆರೋಪ ನಿರಾಕರಿಸಿದ್ದಾರೆ" ಎಂದು ಕುಲಪತಿ ತಿಳಿಸಿದ್ದಾರೆ. ಮೂರು ದಿನಗಳ ಒಳಗಾಗಿ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸಿ ವರದಿ ಸಲ್ಲಿಸಲಿದೆ. ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಾಡಿ ಸರ್ಚ್ ಬಳಿಕ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕುಲಪತಿಗೆ ದೂರು ನೀಡಿದರು. ಕ್ಷೇಮಪಾಲಕ ಅಧಿಕಾರಿ ಸಂಧ್ಯಾ ಪಟೇಲ್ ಹಾಗೂ ವಾರ್ಡನ್ ಚಂದಾ ಬಯಾನ್ ಆರೋಪ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News