ಹಮಾಸ್ ನೆಲೆಗಳ ಮೇಲೆ ಇಸ್ರೇಲ್ ದಾಳಿ
Update: 2018-03-27 22:59 IST
ಗಾಝಾ ಸಿಟಿ, ಮಾ. 27: ಗಾಝಾ ಪಟ್ಟಿಯಲ್ಲಿರುವ ಎರಡು ಹಮಾಸ್ ನೆಲೆಗಳ ಮೇಲೆ ಇಸ್ರೇಲ್ ಟ್ಯಾಂಕ್‌ಗಳು ರವಿವಾರ ರಾತ್ರಿ ದಾಳಿ ನಡೆಸಿದವು. ಗಾಝಾ ಪಟ್ಟಿಯಿಂದ ಗುಂಡು ಹಾರಾಟ ನಡೆದ ಬಳಿಕ ಈ ದಾಳಿ ನಡೆಸಲಾಯಿತು ಎಂಬುದಾಗಿ ಇಸ್ರೇಲ್ ಸೇನೆ ಹೇಳಿದೆ.
ಗಾಝಾ ಪಟ್ಟಿಯ ಉತ್ತರದಲ್ಲಿರುವ ಹಮಾಸ್‌ನ ಸಶಸ್ತ್ರ ಘಟಕಕ್ಕೆ ಸೇರಿದ ಎರಡು ವೀಕ್ಷಣಾ ಕೇಂದ್ರಗಳ ಮೇಲೆ ದಾಳಿ ನಡೆಸಲಾಯಿತು.
ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.