ಜೆರುಸಲೇಂಗೆ ಹೋಗಲು ಗಾಝಾ ಪಟ್ಟಿಯ ಕ್ರೈಸ್ತರಿಗೆ ಅನುಮತಿ ಸಿಕ್ಕಿಲ್ಲ

Update: 2018-03-28 17:39 GMT

ಜೆರುಸಲೇಂ, ಮಾ. 28: ಈಸ್ಟರ್ ಹಬ್ಬಾಚರಣೆಗಾಗಿ ಜೆರುಸಲೇಂಗೆ ಹೋಗಲು ತಮಗೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ಗಾಝಾ ಪಟ್ಟಿಯಲ್ಲಿರುವ ಕ್ರೈಸ್ತರು ಮಂಗಳವಾರ ಹೇಳಿದ್ದಾರೆ.

ಗಾಝಾ ಕ್ರೈಸ್ತರ ಪ್ರಯಾಣಕ್ಕಾಗಿ ಸುಮಾರು 600 ಪರ್ಮಿಟ್‌ಗಳನ್ನು ನೀಡುವಂತೆ ಕೋರಿ ಚರ್ಚ್ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ, ಆದರೆ ಗುಡ್ ಫ್ರೈಡೇಗೆ ಕೇವಲ ಮೂರು ದಿನ ಇರುವಾಗಲೂ ಯಾವುದೇ ಪರ್ಮಿಟ್ ಲಭಿಸಿಲ್ಲ ಎಂದು ಜೆರುಸಲೇಂನ ಲ್ಯಾಟಿನ್ ಪ್ಯಾಟ್ರಿಯಾರ್ಕೇಟ್ ಹೇಳಿದ್ದಾರೆ.

ಹಮಾಸ್‌ನ ನಿಯಂತ್ರಣದಲ್ಲಿರುವ ಗಾಝಾ ಪಟ್ಟಿಯಿಂದ ಹೊರಗೆ ಜನರು ಬರುವುದನ್ನು ಇಸ್ರೇಲ್ ನಿರ್ಬಂಧಿಸಿದೆ.

ಯಹೂದಿ ರಜಾ ಅವಧಿ ‘ಪಾಸೋವರ್’ ಕೂಡ ಈ ವಾರಾಂತ್ಯದಲ್ಲೇ ಆರಂಭವಾಗುವುದರಿಂದ ಇಸ್ರೇಲ್ ಈ ಬಾರಿ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ಮಾಡಿದೆ. ಮುಂದಿನ ರವಿವಾರ ವಿಶ್ವಾದ್ಯಂತ ಕ್ರೈಸ್ತರು ಈಸ್ಟರ್ ಹಬ್ಬವನ್ನು ಆಚರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News