ಬಹರೈನ್ ವಿಮಾನದಿಂದ ವಾಯುಪ್ರದೇಶ ಉಲ್ಲಂಘನೆ: ವಿಶ್ವಸಂಸ್ಥೆಗೆ ಕತರ್ ದೂರು

Update: 2018-03-28 18:04 GMT

ದುಬೈ, ಮಾ. 28: ಬಹರೈನ್‌ನ ಯುದ್ಧ ವಿಮಾನವೊಂದು ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದೆ ಎಂದು ಕತರ್ ಆರೋಪಿಸಿದೆ ಹಾಗೂ ಈ ಸಂಬಂಧ ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ದೂರು ನೀಡಿದೆ ಎಂದು ಸರಕಾರಿ ಸುದ್ದಿ ಸಂಸ್ಥೆ ಕ್ಯೂಎನ್‌ಎ ಬುಧವಾರ ವರದಿ ಮಾಡಿದೆ.

ರವಿವಾರ ಈ ಘಟನೆ ಸಂಭವಿಸಿದೆ ಎಂದು ಅದು ಹೇಳಿದೆಯಾದರೂ, ಅದರ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ.

‘‘ಇದೊಂದು ಗಂಭೀರ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಸಾರಾಸಗಟು ಉಲ್ಲಂಘನೆಯಾಗಿದೆ’’ ಎಂದು ಕತರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News