×
Ad

ಶುಕ್ರವಾರ ಫೆಲೆಸ್ತೀನೀಯರ ಬೃಹತ್ ಪ್ರತಿಭಟನೆ

Update: 2018-03-29 23:09 IST
ಐಸನ್‌ಕೋಟ್

ಜೆರುಸಲೇಂ, ಮಾ. 29: ಗಾಝಾ ಗಡಿಯಲ್ಲಿ ಶುಕ್ರವಾರ ನಡೆಯಲು ನಿಗದಿಯಾಗಿರುವ ಬೃಹತ್ ಪ್ರತಿಭಟನೆಗೆ ಪೂರ್ವಭಾವಿಯಾಗಿ, ಸೈನಿಕರಿಗೆ ಗುಂಡು ಹಾರಿಸಲು ಅನುಮತಿ ನೀಡಲಾಗಿದೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಗಡಿ ಐಸನ್‌ಕೋಟ್ ಎಚ್ಚರಿಕೆ ನೀಡಿದ್ದಾರೆ.

ಪರಿಸ್ಥಿತಿಯನ್ನು ಎದುರಿಸಲು ಗಡಿಯಲ್ಲಿ ವಿಶೇಷ ಪಡೆಗಳ ಪರಿಣತ ಶೂಟರ್‌ಗಳು ಸೇರಿದಂತೆ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. ಇದು ತಾನು 2015ರಲ್ಲಿ ಸೇನಾ ಮುಖ್ಯಸ್ಥನ ಹುದ್ದೆ ವಹಿಸಿದ ಬಳಿಕ ಎದುರಾಗುತ್ತಿರುವ ಅತ್ಯಂತ ಗಂಭೀರ ಭದ್ರತಾ ಬೆದರಿಕೆಯಾಗಿದೆ ಎಂದು ಅವರು ಹೇಳಿದರು.

ಇಸ್ರೇಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೇಂಗೆ ಸ್ಥಳಾಂತರಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರವನ್ನು ವಿರೋಧಿಸಿ ಫೆಲೆಸ್ತೀನೀಯರು ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News