ಕಾವೇರಿ ಜಲ ಮಂಡಳಿ ಸ್ಥಾಪನೆಗೆ ಆಗ್ರಹಿಸಿ ಎಐಎಡಿಎಂಕೆಯಿಂದ ಉಪವಾಸ ಧರಣಿ

Update: 2018-03-30 18:10 GMT

ಚೆನ್ನೈ, ಮಾ.30: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ತಕ್ಷಣ ಕಾವೇರಿ ವ್ಯವಸ್ಥಾಪನಾ ಮಂಡಳಿ ಮತ್ತು ಕಾವೇರಿ ಜಲ ನಿಯಂತ್ರಣ ಸಮಿತಿಯನ್ನು ರಚಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿ ಆಡಳಿತಾರೂಡ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ ಸೋಮವಾರದಂದು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಮಿಳುನಾಡು ಉಪಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಸಮನ್ವಯಕಾರ ಒ. ಪನ್ನೀರ್‌ಸೆಲ್ವಂ ಶುಕ್ರವಾರ ತಿಳಿಸಿದ್ದಾರೆ.

ಅಮ್ಮಾ ಪೆರವಯಿ ಆಯೋಜಿಸಿದ 120 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಸೆಲ್ವಂ, ಉಪವಾಸ ಸತ್ಯಾಗ್ರಹವು ಎಐಎಡಿಎಂಕೆಗೆ ತಮಿಳುನಾಡಿನ ಹಕ್ಕನ್ನು ರಕ್ಷಿಸುವಲ್ಲಿ ಇರುವ ಬದ್ಧತೆಯನ್ನು ಪ್ರದರ್ಶಿಸಲಿದೆ ಮತ್ತು ದೇಶದ ಹಾಗೂ ಕೇಂದ್ರ ಸರಕಾರದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.

 ತಮಿಳುನಾಡು ಸರಕಾರವು ಕೇಂದ್ರ ಸರಕಾರದ ಮೇಲೆ ಕಾವೇರಿ ವಿಷಯದಲ್ಲಿ ಒತ್ತಡ ಹೇರುತ್ತಿಲ್ಲ ಎಂಬ ಆರೋಪಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಎಡಪಡಿ ಕೆ. ಪಳನಿಸ್ವಾಮಿ, ಒಂದು ರಾಜ್ಯದ ಸಮಸ್ಯೆಗಾಗಿ ಸಂಸತ್‌ನ ಇತ್ತೀಚಿನ ಅಧಿವೇಶನವು 17 ದಿನಗಳ ಕಾಲ ಸ್ಥಗಿತಗೊಂಡಿತ್ತು. ನಮ್ಮ ಸಂಸದರು ಆ ರೀತಿ ಕಾವೇರಿ ವಿಷಯದಲ್ಲಿ ಸಂಸತ್‌ನಲ್ಲಿ ಪ್ರತಿಭಟನೆ ನಡೆಸಿದ್ದರು ಎಂದು ಸೆಲ್ವಂ ತಿಳಿಸಿದ್ದಾರೆ. ಕಾವೇರಿ ಜಲ ವಿವಾದ ಮಂಡಳಿಯ ಅಂತಿಮ ಆದೇಶವು 2007ರಲ್ಲಿ ಹೊರಬಿದ್ದಿದ್ದರೂ ಅಂದು ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರಕಾರದ ಭಾಗವಾಗಿದ್ದ ಡಿಎಂಕೆ ಈ ಆದೇಶವನ್ನು ಗ್ಯಾಜೆಟ್‌ನಲ್ಲಿ ಉಲ್ಲೇಖಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News