×
Ad

ಐಎನ್‌ಎಕ್ಸ್ ಮೀಡಿಯಾ ಪ್ರಕರಣ: ಪೀಟರ್ ಮುಖರ್ಜಿಗೆ ನ್ಯಾಯಾಂಗ ಬಂಧನ

Update: 2018-03-31 23:16 IST

ಹೊಸದಿಲ್ಲಿ, ಮಾ. 31: ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮದ ಮಾಜಿ ದೊರೆ ಪೀಟರ್ ಮುಖರ್ಜಿ ಅವರಿಗೆ ದಿಲ್ಲಿ ಉಚ್ಚ ನ್ಯಾಯಾಲಯ ಎಪ್ರಿಲ್ 13ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

 ಈ ಹಿಂದೆ ದಿಲ್ಲಿ ನ್ಯಾಯಾಲಯ ಪೀಟರ್ ಮುಖರ್ಜಿಯನ್ನು ಮಾರ್ಚ್ 31ರ ವರೆಗೆ ಸಿಬಿಐ ಕಸ್ಟಡಿಗೆ ನೀಡಿತ್ತು. ಆಗಿನ ಹಣಕಾಸು ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಲಂಚ ನೀಡಿ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯಿಂದ ಮುಖರ್ಜಿ ಮಾಲಕತ್ವದ ಐಎನ್‌ಎಕ್ಸ್ ಮೀಡಿಯಾ ಲಿಮಿಟೆಡ್ ಅನುಮತಿ ಪಡೆದಿದೆ ಎಂದು ಆರೋಪಿಸಲಾಗಿದೆ. ತನಿಖೆಗೆ ಪೀಟರ್ ಮುಖರ್ಜಿ ಸಹಕರಿಸುತ್ತಿಲ್ಲ ಎಂದೂ ಹೇಳಿರುವ ಸಿಬಿಐ, ಅವರನ್ನು ಕಾರ್ತಿ ಚಿದಂಬರಂ ಹಾಗೂ ಅವರ ಸಿಎಯೊಂದಿಗೆ ಮುಖಮುಖಿಯಾಗಿಸಿಲ್ಲ. ಮುಂದಿನ ದಿನಾಂಕದಲ್ಲಿ ಪೀಟರ್ ಮುಖರ್ಜಿಯನ್ನು ಮುಂಬೈ ಕಾರಾಗೃಹದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಆದಾಗ್ಯೂ, ಮಾರ್ಚ್ 23ರಂದು ದಿಲ್ಲಿ ಉಚ್ಚ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿ 10 ಲಕ್ಷ ರೂ. ಶ್ಯೂರಿಟಿ ಮೇಲೆ ಕಾರ್ತಿ ಚಿದಂಬರಂ ಅವರನ್ನು ಬಿಡುಗಡೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News