ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಮಾರ್ಗವಿಲ್ಲಿದೆ

Update: 2018-04-01 10:49 GMT

ಕೆಲವರು ಬಿಗಿಯಾದ ಉಡುಪು ಧರಿಸುವುದನ್ನು ಇಷ್ಟಪಡುವುದಿಲ್ಲ. ನಾಲ್ಕು ಜನರ ಮಧ್ಯ ಇದ್ದಾಗ ತಮ್ಮ ಶರೀರವನ್ನು ಮರೆಮಾಚಿಕೊಳ್ಳಲು ಪ್ರಯತ್ನಿಸುತ್ತಾರೆ. ಇದಕ್ಕೆ ಅವರ ಡೊಳ್ಳುಹೊಟ್ಟೆ ಮುಖ್ಯ ಕಾರಣ ವಾಗಿದೆ. ಹೆಚ್ಚಿನ ದೈಹಿಕ ಚಟುವಟಿಕೆಯಿಲ್ಲದಿರುವುದು, ಅನಾರೋಗ್ಯ ಕರ ಚಟಗಳು ಮತ್ತು ಜೀವನಶೈಲಿ ಈ ಸಮಸ್ಯೆಗೆ ಪ್ರಮುಖ ಕಾರಣ ಗಳಾಗಿವೆ.

ಮೊದಲನೆಯದಾಗಿ ಬೊಜ್ಜುಹೊಟ್ಟೆಯೇ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದೇ ವ್ಯಕ್ತಿಯ ಸೊಂಟದ ಸುತ್ತಳತೆ ತೀರ ಹೆಚ್ಚಾಗಿದ್ದರೆ ಸಾಧ್ಯವಾದಷ್ಟು ಶೀಘ್ರ ಅದನ್ನು ತಗ್ಗಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಅದು ಕ್ಯಾನ್ಸರ್, ಹೃದ್ರೋಗ, ಖಿನ್ನತೆ, ಲೈಂಗಿಕ ಅಸಾಮರ್ಥ್ಯ....ಅಷ್ಟೇ ಏಕೆ,ಬುದ್ಧಿಮಾಂದ್ಯತೆಗೂ ಕಾರಣವಾಗುತ್ತದೆ.

ಬೆಳಿಗ್ಗೆ ನಿದ್ರೆಯಿಂದ ಎದ್ದ ತಕ್ಷಣ ತಿಂಡಿ ತಿನ್ನುವ ಮೊದಲು ಲಿಂಬೆರಸವನ್ನು ಸೇವಿಸುವುದು ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಮತ್ತು ಸುಲಭದ ಮಾರ್ಗಗಳಲ್ಲೊಂದಾಗಿದೆ. ವಿಟಾಮಿನ್ ಸಿ ಅನ್ನು ಹೇರಳವಾಗಿ ಒಳಗೊಂಡಿರುವ ಜೊತೆಗೆ ಲಿಂಬೆಯ ಅತ್ಯುತ್ತಮ ಗುಣಗಳಲ್ಲೊಂದೆಂದರೆ ಅದು ಜೀರ್ಣಾಂಗ ವ್ಯವಸ್ಥೆಗೆ ಹಾಗೂ ಯಕೃತ್ತಿನ ಉತ್ತಮ ಕಾರ್ಯ ನಿರ್ವಹಣೆಗೆ ನೆರವಾಗುತ್ತದೆ.

ಹೊಟ್ಟೆಯ ಬೊಜ್ಜನ್ನು ಕರಗಿಸಲು ಅಥವಾ ಶರೀರದ ತೂಕವನ್ನು ಕಡಿಮೆ ಮಾಡಲು ನಮ್ಮ ಜೀರ್ಣಾಂಗ ವ್ಯವಸ್ಥೆ ಮತ್ತು ಯಕೃತ್ತು ಆರೋಗ್ಯ ಯುತವಾಗಿರಬೇಕು. ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣಗೊಳ್ಳದಿದ್ದರೆ ಕೊಬ್ಬನ್ನು ಕರಗಿಸಲು ಅಗತ್ಯ ಪೌಷ್ಟಿಕಾಂಶಗಳ ಪೂರೈಕೆಗೆ ತಡೆಯುಂಟಾಗುತ್ತದೆ ಮತ್ತು ಚಯಾಪಚಯ ಪ್ರಕ್ರಿಯೆ ಯು ನಿಧಾನಗೊಳ್ಳುತ್ತದೆ.

 ಲಿಂಬೆ ಸಿಟ್ರಸ್ ವರ್ಗಕ್ಕೆ ಸೇರಿದೆ. ಎಲ್ಲ ಸಿಟ್ರಸ್ ಹಣ್ಣುಗಳಲ್ಲಿ ಸಾಮಾನ್ಯವಾಗಿರುವ ಅಂಶಗಳೆಂದರೆ ಅವು ಸಮೃದ್ಧ ನಾರು ಹೊಂದಿರುತ್ತವೆ, ಕೊಬ್ಬಿನಿಂದ ಮುಕ್ತವಾಗಿರುತ್ತವೆ ಹಾಗೂ ಸೋಡಿಯಂ ಮತ್ತು ಕೊಲೆಸ್ಟ್ರಾಲ್‌ನ್ನು ಕಡಿಮೆ ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಈ ಅಂಶಗಳು ಶರೀರದ ತೂಕವನ್ನು ತಗ್ಗಿಸಲು ನೆರವಾಗುತ್ತವೆ. ವಿಶೇಷವಾಗಿ ಲಿಂಬೆಯಲ್ಲಿ ಹೇರಳ ಪೆಕ್ಟಿನ್ ನಾರು, ಮ್ಯಾಗ್ನೀಷಿಯಂ, ವಿಟಾಮಿನ್ ಸಿ, ಸಿಟ್ರಿಕ್‌ಆ್ಯಸಿಡ್ ಇತ್ಯಾದಿಗಳಿದ್ದು, ಇವು ಕೊಬ್ಬನ್ನು ಕರಗಿಸಲು, ಶರೀರದಲ್ಲಿಯ ವಿಷವಸ್ತುಗಳನ್ನು ಹೊರಗೆ ಹಾಕಲು, ಶರೀರಕ್ಕೆ ಶಕ್ತಿಯನ್ನು ನೀಡಲು ಮತ್ತು ಹಾರ್ಮೋನ್ ಅಸಮತೋಲನ ವನ್ನು ಕಡಿಮೆ ಮಾಡಲು ನೆರವಾಗುತ್ತವೆ. ಹೀಗಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸುವಲ್ಲಿ ಮತ್ತು ಶರೀರದ ತೂಕವನ್ನು ಕಡಿಮೆ ಮಾಡುವಲ್ಲಿ ಲಿಂಬೆಹಣ್ಣು ಅತ್ಯಂತ ಪರಿಣಾಮಕಾರಿಯಾಗಿದೆ.

ಲಿಂಬೆರಸವನ್ನು ಖಾಲಿಹೊಟ್ಟೆಯಲ್ಲಿಯೇ ಏಕೆ ಸೇವಿಸಬೇಕು?

ಬೆಳಿಗ್ಗೆ ಏನನ್ನೂ ತಿಂದಿರದಿದ್ದಾಗ ಲಿಂಬೆರಸವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿಕೊಂಡು ಸೇವಿಸುವುದರಿಂದ ಅದು ಯಕೃತ್ತನ್ನು ವಿಷವಸ್ತು ಗಳಿಂದ ಮುಕ್ತಗೊಳಿಸುತ್ತದೆ ಮತ್ತು ಅದನ್ನು ಒತ್ತಡಮುಕ್ತಗೊಳಿಸುತ್ತದೆ. ಇದು ಶರೀರದ ತೂಕವನ್ನು ತಗ್ಗಿಸಬೇಕೆಂಬ ಗುರಿಯ ಸಾಧನೆಗೆ ನೆರವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ಲಿಂಬೆರಸದೊಂದಿಗೆ ಜೇನು ಅಥವಾ ಶುಂಠಿಯನ್ನೂ ಸೇರಿಸಿಕೊಳ್ಳಬಹುದು.

ಅಲ್ಲದೆ ಬೆಚ್ಚಗಿನ ನೀರಿನ ಸೇವನೆಯೂ ಬೊಜ್ಜನ್ನು ಕಡಿಮೆ ಮಾಡಲು ತುಂಬ ಒಳ್ಳೆಯದು. ಅದು ಆಹಾರವು ಜೀರ್ಣಗೊಳ್ಳಲು ನೆರವಾಗು ತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಪಿಎಚ್ ಮಟ್ಟದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ ಹಾಗೂ ಯಕೃತ್ತಿನಲ್ಲಿಯ ವಿಷವಸ್ತುಗಳನ್ನು ಹೊರಗೆ ಹಾಕುತ್ತದೆ.

ಲಿಂಬೆರಸ ಮತ್ತು ಬೆಚ್ಚಗಿನ ನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದಾಗ ಅದು ಚಯಾಪಚಯವನ್ನು ಹೆಚ್ಚಿಸುತ್ತದೆ. ಲಿಂಬೆಯಲ್ಲಿರುವ ಪೆಕ್ಟಿನ್ ನಾರು ಹಸಿವನ್ನು ನಿಯಂತ್ರಿಸುತ್ತದೆ ಮತ್ತು ಕಡಿಮೆ ಆಹಾರವನ್ನು ಸೇವಿಸುವಂತೆ ಮಾಡುತ್ತದೆ. ಇದರಿಂದಾಗಿ ಹೊಟ್ಟೆಯ ಗಾತ್ರವು ಕಿರಿದಾಗುತ್ತದೆ ಮತ್ತು ಹೊಟ್ಟೆಯ ಬೊಜ್ಜು ಇಳಿಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News