ಎಟಿಪಿ ರ್ಯಾಂಕಿಂಗ್: ಅಗ್ರ ಸ್ಥಾನ ವಶಪಡಿಸಿಕೊಂಡ ನಡಾಲ್
ಪ್ಯಾರಿಸ್, ಎ.2: ಎಟಿಪಿ ರ್ಯಾಂಕಿಂಗ್‌ನಲ್ಲಿ ಸ್ಪೇನ್‌ನ ರಫೆಲ್ ನಡಾಲ್ ನಂ.1 ಸ್ಥಾನ ವಶಪಡಿಸಿಕೊಂಡಿದ್ದಾರೆ. ಮಿಯಾಮಿ ಓಪನ್‌ನಲ್ಲಿ ಅಮೆರಿಕದ ಜಾನ್ ಇಸ್ನೆರ್‌ಗೆ ಶರಣಾಗಿದ್ದ ಸ್ವಿಸ್ ಆಟಗಾರ ರೋಜರ್ ಫೆಡರರ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ನಡಾಲ್ ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ ಬಳಿಕ ಯಾವ ಟೂರ್ನಿಯಲ್ಲಿ ಸರಿಯಾಗಿ ಆಡಿಲ್ಲ. ಮಿಯಾಮಿ ಓಪನ್‌ನಲ್ಲಿ 2ನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಇಸ್ನೆರ್‌ಗೆ ಶರಣಾಗಿದ್ದ ಹಿರಿಯ ಆಟಗಾರ ಫೆಡರರ್ ಸ್ಪೇನ್‌ನ ನಡಾಲ್‌ಗಿಂತ 10 ಅಂಕ ಹಿಂದಿದ್ದಾರೆ.
ಮಿಯಾಮಿ ಓಪನ್ ಚಾಂಪಿಯನ್ ಇಸ್ನೆರ್ 2012ರ ಬಳಿಕ 9ನೇ ರ್ಯಾಂಕಿಗೆ ಭಡ್ತಿ ಪಡೆದಿದ್ದಾರೆ. ಇಸ್ನೆರ್ ವಿರುದ್ಧ ಫೈನಲ್‌ನಲ್ಲಿ ಸೋತಿರುವ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಒಂದು ಸ್ಥಾನ ಮೇಲಕ್ಕೇರಿ 4ನೇ ಸ್ಥಾನ ತಲುಪಿದ್ದಾರ.
ದಕ್ಷಿಣ ಕೊರಿಯಾದ ಹಿಯೊನ್ ಚುಂಗ್ ಇದೇ ಮೊದಲ ಬಾರಿ ಅಗ್ರ-20ರಲ್ಲಿ ಸ್ಥಾನ ಪಡೆದಿದ್ದಾರೆ. ಮಿಯಾಮಿ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದ ಚುಂಗ್ ರ್ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿದ್ದಾರೆ.
►ಎಟಿಪಿ ರ್ಯಾಂಕಿಂಗ್
1. ರಫೆಲ್ ನಡಾಲ್(ಸ್ಪೇನ್), 2. ರೋಜರ್ ಫೆಡರರ್(ಸ್ವಿಸ್),3. ಮರಿನ್ ಸಿಲಿಕ್, 4. ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ),5. ಗ್ರಿಗೊರ್ ಡಿಮಿಟ್ರೊವ್(ಬಲ್ಗೇರಿಯ), 6. ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ(ಅರ್ಜೆಂಟೀನ), 7. ಡೊಮಿನಿಕ್ ಥೀಮ್(ಆಸ್ಟ್ರೀಯ), 8. ಕೇವಿನ್ ಆ್ಯಂಡರ್ಸನ್(ದ.ಆಫ್ರಿಕ), 9. ಜಾನ್ ಇಸ್ನೆರ್(ಅಮೆರಿಕ),10. ಡೇವಿಡ್ ಗಫಿನ್(ಬೆಲ್ಜಿಯಂ).