ಬರಿಗಾಲಿನಲ್ಲಿ ನಡೆಯುವುದರ ಆರೋಗ್ಯಲಾಭಗಳ ಬಗ್ಗೆ ತಿಳಿಯಿರಿ

Update: 2018-04-04 10:58 GMT

ಭಾರತೀಯ ಉಪಖಂಡ ಮತ್ತು ಅದರ ಶ್ರೀಮಂತ ಸಂಪ್ರದಾಯ ವಿಶ್ವಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿವೆ. ವಿಶ್ವವು ಇದೀಗ ಇನ್ನೊಂದು ಭಾರತೀಯ ಸಂಸ್ಕೃತಿಗೆ ತೆರೆದುಕೊಳ್ಳುತ್ತಿದೆ.....ಅದು ಬರಿಗಾಲಿನ ನಡಿಗೆ. ನಾವೆಲ್ಲ ನಮ್ಮ ಮನೆಗಳಲ್ಲಿ ಬರಿಗಾಲುಗಳಲ್ಲಿಯೇ ನಡೆದಾಡುತ್ತೇವೆ ಮತ್ತು ನಮ್ಮ ಅತಿಥಿಗಳಿಂದಲೂ ಅದನ್ನೇ ನಿರೀಕ್ಷಿಸುತ್ತೇವೆ.

ಬರಿಗಾಲಿನಲ್ಲಿ ನಡೆಯುವುದರ ಆರೋಗ್ಯಲಾಭಗಳನ್ನು ತಿಳಿದರೆ ನೀವು ದಂಗಾಗುವುದಷ್ಟೇ ಅಲ್ಲ, ಖಂಡಿತ ಅದನ್ನು ಇಷ್ಟಪಡುತ್ತೀರಿ.

► ಅದು ನಿದ್ರಾಹೀನತೆಯನ್ನು ನಿವಾರಿಸುತ್ತದೆ

ಬರಿಗಾಲಿನಲ್ಲಿ ನಡೆಯುವುದರಿಂದ, ವಿಶೇಷವಾಗಿ ಹುಲ್ಲಿನ ಮೇಲೆ ನಡೆಯುವುದರಿಂದ ನಮ್ಮ ಮನಸ್ಸಿಗೆ ತಕ್ಷಣ ಶಾಂತಿ ದೊರೆಯುತ್ತದೆ. ಇದಕ್ಕೆ ಕಾರಣ? ನಾವು ಬರಿಗಾಲಿನಲ್ಲಿ ನಡೆಯುವಾಗ ನಮ್ಮ ಶರೀರವು ಭೂಮಿಯ ಮೇಲ್ಮೈಯೊಂದಿಗೆ ನೇರ ಸಂಪರ್ಕ ದಲ್ಲಿರುತ್ತದೆ. ಇದು ಭೂಮಿಯ ವಿದ್ಯುತ್ಕಾಂತೀಯ ಕಂಪನ ಆವರ್ತನಗಳು ನಮ್ಮ ಶರೀರದಿಂದ ಹೊರಹೊಮ್ಮುವ ವಿದ್ಯುತ್ಕಾಕಾಂತೀಯ ಕಂಪನ ಆವರ್ತನಗಳೊಂದಿಗೆ ಮೇಳೈಸುವ ಅವಕಾಶವನ್ನು ಒದಗಿಸುತ್ತದೆ. ಇದನ್ನು ಅರ್ತಿಂಗ್ ಎಂದು ಕರೆಯಲಾಗುತ್ತದೆ ಮತ್ತು ಇದು ನಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸಿದ್ಧಗೊಂಡಿದೆ. ನಮ್ಮ ಮನಸ್ಸು ಶಾಂತವಾಗಿರುವುದರಿಂದ ನಿದ್ರಾಹೀನತೆಯ ಸಮಸ್ಯೆಯೂ ದೂರವಾಗುತ್ತದೆ.

► ಶರೀರದ ಕೆಳಭಾಗದಲ್ಲಿ ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ

ಬರಿಗಾಲಿನಲ್ಲಿ ನಡೆಯುವಾಗ ನಮ್ಮ ಅಂಗಾಲುಗಳಲ್ಲಿರುವ ಬಿಂದುಗಳು ಆಕ್ವಾಪ್ರೆಷರ್ ಪ್ರಕ್ರಿಯೆಗೆ ಒಳಗಾಗುತ್ತವೆ. ಇದು ನರಮಂಡಳವನ್ನು ಶಾಂತಗೊಳಿಸುತ್ತದೆ ಮತ್ತು ಕಾಲುಗಳು ಹಾಗೂ ಪಾದಗಳಲ್ಲಿ ರಕ್ತಸಂಚಾರವನ್ನು ಉತ್ತಮಗೊಳಿಸುತ್ತದೆ. ಇದು ವೆರಿಕೋಸ್ ವೇಯ್ನ್ಸಿ ಅಥವಾ ಮಧುಮೇಹದಿಂದ ಬಳಲುವವರಿಗೆ ಲಾಭಕಾರಿ ಯಾಗಿದೆ.

► ಸಮತೋಲನವನ್ನು ಉತ್ತಮಗೊಳಿಸುತ್ತದೆ

ನಮ್ಮ ಕಿವಿಯಲ್ಲಿರುವ ವೆಸ್ಟಿಬ್ಯೂಲರ್ ಸಿಸ್ಟಮ್ ನಮ್ಮ ಶರೀರದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಸರಿಯಾಗಿ ಕಾರ್ಯ ನಿರ್ವಹಿಸಲು ಅದು ನಮ್ಮ ಶರೀರದಾದ್ಯಂತ ವಿರುವ ಗ್ರಾಹಕಗಳು ನೀಡುವ ಮಾಹಿತಿಗಳನ್ನು ಅವಲಂಬಿಸಿರುತ್ತದೆ. ಇದಕ್ಕೆ ಸಂಬಂಧಿಸಿದ ಅತ್ಯಂತ ಮುಖ್ಯ ಭಾಗವು ನಮ್ಮ ಅಂಗಾಲಿನಲ್ಲಿರುತ್ತದೆ. ಹೀಗಾಗಿ ನಮ್ಮ ಪಾದವು ಭೂಮಿಯೊಂದಿಗೆ ನೇರ ಸಂಪರ್ಕದಲ್ಲಿರುವಾಗಿ ನಮ್ಮ, ವಿಶೇಷವಾಗಿ ನಮಗೆ ವಯಸ್ಸಾಗುತ್ತಿದ್ದರೆ, ಶರೀರವು ಸಮತೋಲನದಲ್ಲಿರುವಂತೆ ನರಮಂಡಳ ಸಂಪರ್ಕಗಳಿಗೆ ಪ್ರಚೋದನೆ ದೊರೆಯುತ್ತದೆ.

► ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಬರಿಗಾಲಿನಲ್ಲಿ ನಡೆಯುವುದರಿಂದ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಕಾಯ್ದಕೊಳ್ಳುವಲ್ಲಿ ಮುಖ್ಯವಾಗಿರುವ ರಕ್ತಕೋಶಗಳ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಸುಧಾರಣೆಯಾಗುತ್ತದೆ. ಜೊತೆಗೆ ಭೂಮಿಯೊಂದಿಗಿನ ಸಂಪರ್ಕವು ನಮ್ಮ ಶರೀರಕ್ಕೆ ಅದರ ನೈಸರ್ಗಿಕ ಆರೋಗ್ಯವನ್ನು ಮರಳಿಸುತ್ತದೆ ಮತ್ತು ಇದು ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ್ದಾಗಿದೆ.

► ಶಕ್ತಿಯನ್ನು ಹೆಚ್ಚಿಸುತ್ತದೆ

ಒತ್ತಡ ಮತ್ತು ಉದ್ವೇಗಗಳು ನಮ್ಮ ಶರೀರದಲ್ಲಿಯ ಶಕ್ತಿಯನ್ನು ಕಡಿಮೆಗೊಳಿಸುತ್ತವೆ. ಬರಿಗಾಲಿನಲ್ಲಿ ನಡೆಯುವದರಿಂದ ಅದು ನಮ್ಮ ಮನಸ್ಸು ಮತ್ತು ಶರೀರದ ಮೇಲೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತದೆ ಮತ್ತು ಕ್ರಮೇಣ ನಮ್ಮ ಶರೀರದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News