ಕಾಮನ್‌ವೆಲ್ತ್‌ನಲ್ಲಿ ಭಾರತದ ಮೊದಲ ದಿನದ ಸಾಧನೆ: ಪದಕದ ಖಾತೆ ತೆರೆದ ಗುರುರಾಜ್

Update: 2018-04-05 05:18 GMT

ಗೋಲ್ಡ್‌ಕೋಸ್ಟ್, ಎ.5: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕನ್ನಡಿಗ ಗುರುರಾಜ್ ಅವರು ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಭಾರತದ ಪದಕದ ಖಾತೆ ತೆರೆದಿದ್ದಾರೆ.

ಕುಂದಾಪುರದ ಗುರುರಾಜ್ ಅವರು ಪುರುಷರ 56 ಕೆ.ಜಿ.ವಿಭಾಗದಲ್ಲಿ ಒಟ್ಟು 249 ಕೆ.ಜಿ.ಭಾರ ಎತ್ತಿ ಎರಡನೇ ಸ್ಥಾನದೊಂದಿಗೆ ಬೆಳ್ಳಿ ಪಡೆದರು.

 ಈಜು: ವಿರ್ಧಾವಾಲ್ ಖಾಡೆ 50 ಮೀಟರ್ ಬಟರ್‌ಫ್ಲೈ ನಲ್ಲಿ ಸೆಮಿಫೈನಲ್‌ಗೆ. ಸಾಜನ್ ಪ್ರಕಾಶ್‌ಗೆ 5ನೇ ಸ್ಥಾನ

ಟೇಬಲ್ ಟೆನಿಸ್:ಭಾರತದ ಪುರುಷರ ಮತ್ತು ಮಹಿಳೆಯರ ತಂಡ ಗೆಲುವಿನ ಶುಭಾರಂಭ

 ಲಾನ್ ಬೌಲ್ಸ್: ಪಿಂಕಿಗೆ ಸೋಲು. ಭಾರತದ ತಂಡಕ್ಕೆ ವೇಲ್ಸ್ ವಿರುದ್ಧ 23-9 ಅಂತರದಲ್ಲಿ ಸೋಲು

ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್: ಕೆ.ಶ್ರೀಕಾಂತ್- ಸೈನಾ ನೆಹ್ವಾಲ್‌ಗೆ ಜಯ

ಸ್ಕ್ವಾಷ್: ಹರೀಂದರ್ ಪಾಲ್ ಸಂಧುಗೆ ಜಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News